Friday, April 11, 2025
Google search engine

Homeರಾಜ್ಯಮಲಯಾಳಂ ನಟ ಮೋಹನ್‌ಲಾಲ್ ಆಸ್ಪತ್ರೆಗೆ ದಾಖಲು

ಮಲಯಾಳಂ ನಟ ಮೋಹನ್‌ಲಾಲ್ ಆಸ್ಪತ್ರೆಗೆ ದಾಖಲು

ಕೊಚ್ಚಿ: ಮಲಯಾಳಂ ನಟ ಮೋಹನ್‌ಲಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಜ್ವರ, ಉಸಿರಾಟದ ತೊಂದರೆ ಮತ್ತು ಸ್ನಾಯು ನೋವು ಸೇರಿದಂತೆ ಆರೋಗ್ಯ ತೊಂದರೆ ಕಾರಣ ಅವರನ್ನು ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಟನಿಗೆ ವೈರಲ್ ಉಸಿರಾಟದ ಸೋಂಕು ಇದೆ ಎಂದು ಶಂಕಿಸಲಾಗಿದೆ. ೬೪ ವರ್ಷ ವಯಸ್ಸಿನ ಮೋಹನ್ ಲಾಲ್ ಅವರಿಗೆ ಐದು ದಿನಗಳವರೆಗೆ ವಿಶ್ರಾಂತಿಗೆ ತಿಳಿಸಲಾಗಿದೆ. ಸಾರ್ವಜನಿಕ ಭೇಟಿ ತಪ್ಪಿಸಲು ಮತ್ತು ಸೂಚಿಸಲಾದ ಔಷಧಿ ಸೂಚನೆ ಅನುಸರಿಸಲು ಸಲಹೆ ನೀಡಲಾಗಿದೆ.

ಎಲ್ ೨: ಎಂಪುರಾನ್ ಮತ್ತು ಅವರ ನಿರ್ದೇಶನದ ಚೊಚ್ಚಲ ಬರೋಜ್‌ನ ಪೋಸ್ಟ್-ಪ್ರೊಡಕ್ಷನ್ ಚಿತ್ರೀಕರಣವನ್ನು ಮುಗಿಸಿದ ನಂತರ, ಮೋಹನ್ ಲಾಲ್ ಗುಜರಾತ್‌ನಿಂದ ಕೊಚ್ಚಿಗೆ ಮರಳಿದರು. ಅಲ್ಲಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತು. ಚಿಕಿತ್ಸೆ ಬಳಿಕ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

RELATED ARTICLES
- Advertisment -
Google search engine

Most Popular