ಕೇರಳ: ಹೃದಯಾಘಾತದ ಹಿನ್ನೆಲೆ ಮಲಯಾಳಂ ಕಿರುತೆರೆ ಧಾರಾವಾಹಿ ನಟಿ ಡಾ. ಪ್ರಿಯಾ ಕೊನೆಯುಸಿರೆಳೆದಿದ್ದಾರೆ. ನಟಿಗೆ ೩೫ ವರ್ಷ ವಯಸ್ಸಾಗಿತ್ತು. ಅಲ್ಲದೇ ಎಂಟು ತಿಂಗಳ ತುಂಬು ಗರ್ಭಿಣಿಯಾಗಿದ್ದ ಪ್ರಿಯಾ ಕೊನೆಯುಸಿರೆಳೆದಿದ್ದು, ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ. ತುಂಬು ಗರ್ಭಿಣಿ ಆಗಿದ್ದ ಪ್ರಿಯಾ ಅವರು ಸಹಜ ತಪಾಸಣೆಗಾಗಿ ಆಸ್ಪತ್ರೆಗೆ ಬಂದಾಗ ಹೃದಯಾಘಾತವಾಗಿದೆ. ಆಪರೇಷನ್ ಮೂಲಕ ಉದರದಿಂದ ಹೊರತೆಗೆದ ಪ್ರಿಯಾ ಅವರ ಮಗು ಸದ್ಯ ಐಸಿಯುನಲ್ಲಿದೆ. ಮಗುವಿನ ಸುರಕ್ಷತೆಗಾಗಿ ಸ್ನೇಹಿತರು, ಸಂಬಂಧಿಕರು ಮತ್ತು ಸಹೋದ್ಯೋಗಿಗಳು ಪ್ರಾರ್ಥಿಸುತ್ತಿದ್ದಾರೆ.