Sunday, April 20, 2025
Google search engine

Homeರಾಜ್ಯ28 ದಿನಗಳ ಅಂತರದಲ್ಲಿ ಕೋಟ್ಯಾಧಿಪತಿಯಾದ ಮಲೆ ಮಹದೇಶ್ವರ

28 ದಿನಗಳ ಅಂತರದಲ್ಲಿ ಕೋಟ್ಯಾಧಿಪತಿಯಾದ ಮಲೆ ಮಹದೇಶ್ವರ

ಹನೂರು: 28 ದಿನಗಳ ಅಂತರದಲ್ಲಿ ಮತ್ತೇ ಪವಾಡ ಪುರುಷ ಮಲೆ ಮಹದೇಶ್ವರ ಕೋಟ್ಯಾಧಿಪತಿಯಾಗಿದ್ದಾನೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳೆದ 28 ದಿನಗಳಿಂದ ಸಂಗ್ರಹವಾಗಿರುವ ಹುಂಡಿಯಲ್ಲಿನ ಕಾಣಿಕೆಯನ್ನು ಮಹದೇಶ್ವರ ಬೆಟ್ಟದ ವಾಣಿಜ್ಯ ಸಂಕೀರ್ಣದಲ್ಲಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರ ಕಾರ್ಯದರ್ಶಿ ಸರಸ್ವತಿ ನೇತೃತ್ವದಲ್ಲಿ ಹುಂಡಿ ಎಣಿಕೆ ನಡೆಯಿತು.

ಹುಂಡಿಯಲ್ಲಿ ಎರಡು ಕೋಟಿ ಹತ್ತು ಲಕ್ಷದ ಎಪ್ಪತ್ತೆಂಟು ಸಾವಿರದ ಹದಿನಾಲ್ಕು ರೂಪಾಯಿಗಳು ಸಂಗ್ರಹವಾಗಿದೆ ಎಂದು ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರ ಕಾರ್ಯದರ್ಶಿ ಸರಸ್ವತಿ ತಿಳಿಸಿದ್ದಾರೆ.

ಹುಂಡಿಯಲ್ಲಿ ಸಂಗ್ರಹವಾಗಿರುವ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಮೌಲ್ಯಮಾಪನ ಮಾಡುವ ಸಿಬ್ಬಂದಿಗಳು ಹುಷಾರಿಲ್ಲದ ಕಾರಣ ಸಂಗ್ರಹವಾಗಿರುವ ಆಭರಣಗಳನ್ನು ಶೇಖರಿಸಿ ಚೀಲದಲ್ಲಿ ಹಾಕಿ ಸೀಲ್ ಮಾಡಲಾಗಿದೆ ಎಂದು ಸರಸ್ವತಿ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular