Saturday, April 19, 2025
Google search engine

Homeರಾಜ್ಯಸುದ್ದಿಜಾಲಕುರ್ನಾಡು ಗ್ರಾಮ ಪಂಚಾಯತ್ ನ ತ್ಯಾಜ್ಯ ವಿಲೇವಾರಿ ಘಟಕದಿಂದ ಅಸಮರ್ಪಕ ಕಾರ್ಯ; ಸಾರ್ವಜನಿಕರಿಗೆ ತೊಂದರೆ

ಕುರ್ನಾಡು ಗ್ರಾಮ ಪಂಚಾಯತ್ ನ ತ್ಯಾಜ್ಯ ವಿಲೇವಾರಿ ಘಟಕದಿಂದ ಅಸಮರ್ಪಕ ಕಾರ್ಯ; ಸಾರ್ವಜನಿಕರಿಗೆ ತೊಂದರೆ

ಮಂಗಳೂರು (ದಕ್ಷಿಣ ಕನ್ನಡ): ಬಾಳೆಪುಣಿ ಗ್ರಾಮ ಪಂಚಾಯತ್ ಗೆ ಒಳಪಟ್ಟ ಪ್ರದೇಶದ ಮುಡಿಪು ಪೇಟೆಯ ಮುಖ್ಯ ರಸ್ತೆಗೆ ತಾಗಿಕೊಂಡು ಕುರ್ನಾಡು ಗ್ರಾಮ ಪಂಚಾಯತ್ ನ ತ್ಯಾಜ್ಯ ವಿಲೇವಾರಿ ಘಟಕವು ಅಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಸಾರ್ವಜನಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹತ್ತಿರದಲ್ಲೆೇ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೂಡ ಇದ್ದು ವಿದ್ಯಾರ್ಥಿಗಳು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಮೂಕ ಪ್ರಾಣಿಗಳು ತ್ಯಾಜ್ಯ ವಿಲೇವಾರಿ ಘಟಕದ ಕೊಳೆತ ತ್ಯಾಜ್ಯಗಳನ್ನು ಹೊರ ತಂದು ರಸ್ತೆಯಲ್ಲಿ ಬಿಟ್ಟು ಹೋಗುತ್ತಿದ್ದು ಇದರಿಂದ ರೋಗ ರುಜಿನಗಳು ಹರಡುತ್ತಿವೆ ಮತ್ತು ವಾಹನಗಳು ಕೂಡಾ ಅಪಘಾತಕ್ಕೀಡಾಗಿವೆ.

ಸಾರ್ವಜನಿಕರು ನಡೆದಾಡುವಾಗ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಮೊದಲುಡಿವೈಎಫ್ಐ ಮುಡಿಪು ಘಟಕ ವತಿಯಿಂದ ತ್ಯಾಜ್ಯ ವಿಲೇವಾರಿ ಘಟಕವನ್ನು ತೆರವುಗೊಳಿಸಲು ಕುರ್ನಾಡು ಗ್ರಾಮ ಪಂಚಾಯತ್ ಗೆ ಮನವಿ ಮಾಡಿತ್ತು. ಆದರೆ ಪಂಚಾಯತ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರು ಈ ತ್ಯಾಜ್ಯ ಘಟಕದಿಂದ ಬೇಸತ್ತಿದ್ದು ಈ ಕೂಡಲೇ ಪಂಚಾಯತ್ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಈ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ತ್ಯಾಜ್ಯ ವಿಲೇವಾರಿ ಘಟಕವನ್ನು ತೆರವುಗೊಳಿಸಬೇಕಂದು ಆಗ್ರಹಿಸಲಾಯಿತು.

ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕುರ್ನಾಡು ಮತ್ತು ಬಾಳೆಪುಣಿ ಗ ಗ್ರಾಮ ಪಂಚಾಯತ್ ಮುಂಭಾಗ ಡಿವೈಎಫ್ಐ ನೇತೃತ್ವದಲ್ಲಿ ಧರಣಿ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಲಾಯಿತು. ನಿಯೋಗದಲ್ಲಿ ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ,ಉಪಾಧ್ಯಕ್ಷ ರಝಾಕ್ ಮುಡಿಪು, ಮುಖಂಡರಾದ ರಝಾಕ್ ಮೊಂಟೆಪದವು,ಸಾಮಾಜಿಕ ಕಾರ್ಯಕರ್ತರಾದ ಅಬೂಬಕ್ಕರ್ ಜಲ್ಲಿ,ಇರ್ಷಾದ್ ದರ್ಕಾಸ್,ಕಲೀಲ್ ನಂದಾರಪಡ್ಪು,ಮಹ್ರೂಫ್,ರಫೀಝ್,ಶರಫ್,ನಝೀರ್, ಶಹಲ್, ಆತಿಫ್ ಮುಡಿಪು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular