ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ತಮ್ಮ ಹೇಳಿಕೆ ಹಿಂಪಡೆದಿದ್ದಾರೆ. ಆದರೂ ಅವರ ವಿರುದ್ಧ ದುರುದ್ದೇಶಪೂರ್ವಕವಾಗಿ ಕೇಸು ದಾಖಲಿಸಿ ಎಫ್‌ಐಆರ್ ಹಾಕಿರುವುದು ಖಂಡಿತ ತಪ್ಪು ಎಂದು ಜಿಲ್ಲಾ ಬಿಜೆಪಿ ರೈತ ಮೊರ್ಚಾ ಅದ್ಯಕ್ಷ ಹಾಗೂ ಕರ್ನಾಟಕ ವಸ್ತು ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ ಗೌಡ ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೆಂಬಲಿಸಿ ಹೇಳಿಕೆ ನೀಡುತ್ತಾ ಕನಕ ಗುರು ಪೀಠದ ಸ್ವಾಮೀಜಿ ಜನ ದಂಗೆ ಏಳುತ್ತಾರೆ ಅಂತ ಕರೆ ಕೊಟ್ಟಾಗ ಎಫ್ ಐ ಆರ್ ಏಕೆ ದಾಖಲಾಗಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಸ್ವತಹ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಬಂಧಿಸಿದರೆ ಜನ ದಂಗೆ ಏಳ್ತಾರೆ ಅಂತ ಹೇಳುವ ಮೂಲಕ ದಂಗೆ ಏಳಿ ಎಂದು ಪ್ರಚೋದಿಸುವ ಮೂಲಕ ಸಾಮಾಜಿಕ ಅಶಾಂತಿಗೆ ಕರೆ ಕೊಟ್ಟಿದ್ದರ ಬಗ್ಗೆ ಎಫ್ ಐ ಆರ್ ದಾಖಲಾಗಲಿಲ್ಲ.ಎಂದು ಸರ್ಕಾರದ ವಿರೋಧಿ ನೀತಿ ಬಗ್ಗೆ ಗುಡುಗಿದ್ದಾರೆ.
ದೋ ನಂಬರ್ ಜಮೀರ್ ಸಾರ್ವಜನಿಕ ವೇದಿಕೆಯಲ್ಲಿ ದೇವೇಗೌಡರ ಕುಟುಂಬವನ್ನು ಮುಸ್ಲೀಮರು ಸೇರಿ ಖರೀದಿಸುತ್ತೇವೆ ಎಂದು ಹೇಳಿದಾಗ ಎಫ್ ಐ ಆರ್ ದಾಖಲಾಗಲಿಲ್ಲ, ಆದರೂ ಸಹ ವರ್ಣ, ಧರ್ಮ ಮತ್ತು ಜಾತಿ ಮೇಲೆ ವ್ಯಕ್ತಿಹರಣ ಮಾಡಬಾರದು ಅಂತ ಸಂವಿಧಾನ ಹೇಳಿದ ಮಾತು ಮೀರಿ ಕೇಂದ್ರದ ಮಂತ್ರಿಗೆ ಕರಿಯ ಅಂದಾಗ ಜಮೀರನ ಮೇಲೆ ಎಫ್ ಐ ಆರ್ ದಾಖಲಾಗಲಿಲ್ಲ. ಆದರೆ ಮುಸ್ಲೀಮರು ಈ ನೆಲದ ಕಾನೂನಿಗೆ ಗೌರವಿಸದಿದ್ದರೆ ಅದರ ಅಡಿಯಲ್ಲಿ ನಡೆಯದಿದ್ದರೆ ಅವರ ಮತದಾನದ ಹಕ್ಕು ಕಸಿಯುವುದು ಸೂಕ್ತ ಎಂಬ ಹೇಳಿಕೆ ಮೇಲೆ ಪೂಜ್ಯ ಚಂದ್ರಶೇಖರನಾಥ ಸ್ವಾಮೀಜಿಯವರ ಮೇಲೆ ಎಫ್ ಐ ಆರ್ ದಾಖಲಿಸಿದ್ದಾರೆ ಎಂದರೆ ಅದು ಈ ಸರ್ಕಾರದ ದೃಷ್ಟಿಕೋನದ ಪ್ರದರ್ಶನ ಅಷ್ಟೇ.
ತಮ್ಮ ಹೇಳಿಕೆಯಿಂದ ಬೇಸರವಾಗಿದ್ದರೆ ವಿಷಾದವಿದೆ ಎಂದು ಪೂಜ್ಯರು ಹೇಳಿದ್ದಾರೆ. ಈ ವಿಚಾರವನ್ನು ಇಲ್ಲಿಗೇ ಕೈಬಿಡಿ ಎಂದು ಕೋರಿದ್ದಾರೆ. ಆದರೆ, ಒಕ್ಕಲಿಗ ವಿರೋಧಿ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಸಮುದಾಯದ ಸ್ವಾಮೀಜಿಗಳ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದೆ. ಈ ಸರ್ಕಾರ ಒಕ್ಕಲಿಗರ ವಿರುದ್ಧ ವಿಷ ಕಾರುತ್ತಿರುವುದು ಇದೇ ಮೊದಲಲ್ಲ ಎಂದು ಆಕ್ರೋಶ ಹೊರಹಾಕಿದೆ.
ಒಕ್ಕಲಿಗ ವಿರೋಧಿ ಕಾಂಗ್ರೆಸ್ ಸರ್ಕಾರದ ನಡೆಗೆ ನಮ್ಮ ಧಿಕ್ಕಾರವಿದೆ. ಶ್ರೀಗಳ ಮೇಲೆ ದಾಖಲಿಸಿರುವ ಎಫ್‌ಐಆರ್ ವಿಚಾರವಾಗಿ ಕಾಂಗ್ರೆಸ್‌ನಲ್ಲಿರುವ ಒಕ್ಕಲಿಗ ಮಂತ್ರಿಗಳು ಮತ್ತು ಶಾಸಕರು ಜಾಣಮೌನಕ್ಕೆ ಶರಣಾಗಿರುವುದು ನಾಚಿಕೆಗೇಡು. ಜಾಣಮೌನ ಕುಲದ್ರೋಹಿಗಳ ಗುಣ. ಇಂಥವರಿಗೆ ಮುಂದಿನ ದಿನಗಳಲ್ಲಿ ಒಕ್ಕಲಿಗ ಕುಲಭಾಂದವರು ತಕ್ಕಪಾಠ ಕಲಿಸುವುದು ನಿಶ್ಚಿತ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.