Tuesday, September 16, 2025
Google search engine

Homeರಾಜ್ಯಮಾಲೂರು ಶಾಸಕರ ಆಯ್ಕೆ ಅಸಿಂಧು: ಹೈಕೋರ್ಟ್ ಆದೇಶ, ಮರು ಮತ ಎಣಿಕೆಗೆ ನಿರ್ದೇಶನ

ಮಾಲೂರು ಶಾಸಕರ ಆಯ್ಕೆ ಅಸಿಂಧು: ಹೈಕೋರ್ಟ್ ಆದೇಶ, ಮರು ಮತ ಎಣಿಕೆಗೆ ನಿರ್ದೇಶನ

ಬೆಂಗಳೂರು : ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕರ ಆಯ್ಕೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್ ಇದೀಗ ಆದೇಶ ಹೊರಡಿಸಿದೆ. ಮರುಮತ ಎಣಿಕೆಯ ನಂತರ ಹೊಸದಾಗಿ ಫಲಿತಾಂಶ ಘೋಷಿಸಲು ನ್ಯಾ.ಆರ್ ದೇವದಾಸ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ. ಇದೆ ವೇಳೆ ಶಾಸಕರ ಪರವಾಗಿ ವಕೀಲರು 30 ದಿನಗಳ ಕಾಲ ಅವಕಾಶ ಕೋರಿ ಮನವಿ ಸಲ್ಲಿಸಿದ್ದು ಹೈಕೋರ್ಟ್ 30 ದಿನಗಳ ಕಾಲ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದೆ.

4 ವಾರಗಳಲ್ಲಿ ಹೈಕೋರ್ಟ್ ಮರು ಮತ ಎಣಿಕೆ ನಡೆಸಲು ಆದೇಶ ನೀಡಿದ್ದು, ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ವೈ ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿ ಆದೇಶ ಹೊರಡಿಸಿತು. ಜಿಲ್ಲಾ ಚುನಾವಣಾ ಅಧಿಕಾರಿ ಮತ ಎಣಿಕೆಯ ವಿಡಿಯೋ ಸಲ್ಲಿಸಿಲ್ಲ ಹಾಗಾಗಿ ಜಿಲ್ಲಾ ಚುನಾವಣಾ ಅಧಿಕಾರಿ ವಿರುದ್ಧ ಸಹ ಕ್ರಮಕ್ಕೆ ಹೈಕೋರ್ಟ್ ಸೂಚನೆ ನೀಡಿತು. ಶಾಸಕ ಕೆ ವೈ ನಂಜೇಗೌಡ ಆಯ್ಕೆ ಅಸಿಂಧು ಉಳಿಸಿ ಹೈಕೋರ್ಟ್ ಆದೇಶಿಸಿದ್ದು 4 ವಾರಗಳಲ್ಲಿ ಹೈಕೋರ್ಟ್ ಮರು ಮತ ಎಣಿಕೆ ನಡೆಸಲು ಆದೇಶ ನೀಡಿತು.

ಇದೇ ವೇಳೆ ಶಾಸಕ ಕೆ ವೈ ನಂಜೆಗೌಡ ಪರ ಹಿರಿಯ ವಕೀಲೆ ನಳಿನ ಮಾಯಾಗೌಡ ಹೈಕೋರ್ಟಿಗೆ ಮನವಿ ಮಾಡಿದ್ದು, ಹೈಕೋರ್ಟ್ ತೀರ್ಪಿಗೆ ಮಧ್ಯಂತರ ತಡೆ ನೀಡುವಂತೆ ಮನವಿ ಮಾಡಿದರು. ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸುವವರೆಗೆ ತಡೆ ನೀಡಿ 30 ದಿನಗಳ ವರೆಗೆ ತಡೆ ನೀಡಲು ಕೆವೈ ನಂಜೇಗೌಡ ಪರ ವಕೀಲರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಇದೆ ವೇಳೆ ಹೈಕೋರ್ಟ್ ಸುಪ್ರೀಂ ಕೋರ್ಟ್ ಗೆ ಮೇಲ್ಮನೆ ಸಲ್ಲಿಸಲು ಶಾಸಕ ಕೆ.ವೈ ನಂಜೇಗೌಡರಿಗೆ ಅವಕಾಶ ನೀಡಿದ್ದು ಹಾಗಾಗಿ 30 ದಿನಗಳ ಕಾಲ ಕೆ ವೈ ನಂಜೇಗೌಡಗೆ ಬಿಗ್ ರಿಲೀಫ್ ಸಿಕಂತಾಗಿದೆ.

RELATED ARTICLES
- Advertisment -
Google search engine

Most Popular