Saturday, February 21, 2026
Google search engine

Homeಅಪರಾಧಗಾಂಜಾ ಮಾರಾಟಕ್ಕೆ ಯತ್ನ: ಯುವಕ ಅರೆಸ್ಟ್

ಗಾಂಜಾ ಮಾರಾಟಕ್ಕೆ ಯತ್ನ: ಯುವಕ ಅರೆಸ್ಟ್

ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನನ್ನು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ. ಪ್ರಶಾಂತ್ @ ಪ್ರಸಾದ್, ಬಂಧಿತ ಯುವಕ. ಬಂಟ್ವಾಳ ತಾಲೂಕು ಕೊಡ್ಮಾಣು ಗ್ರಾಮದ ಪಕ್ಕಳಪಾದೆ ಎಂಬಲ್ಲಿ ರಸ್ತೆಯ ಬದಿಯ ನಿರ್ಜನ ಜಾಗದಲ್ಲಿ ಒಬ್ಬಾತನು ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡಿ ಲಾಭ ಗಳಿಸುವ ಉದ್ದೇಶದಿಂದ ಅಕ್ರಮವಾಗಿ ವಶದಲ್ಲಿಟ್ಟುಕೊಂಡಿರುವುದಾಗಿ ಮಾಹಿತಿ ಬಂದ ಮೇರೆಗೆ, ಮಂಜುನಾಥ ಟಿ ಪೊಲೀಸ್ ಉಪ ನಿರೀಕ್ಷಕರು (ಕಾ&ಸು) ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆರವರು ಸಿಬ್ಬಂದಿಗಳೊಂದಿಗೆ ತೆರಳಿ ಅಸಾಮಿಯನ್ನು ಹಿಡಿದು ವಿಚಾರಿಸಿದಾಗ ಆರೋಪಿಯು ಗಾಂಜಾವನ್ನು ಶೇಖರಿಸಿಟ್ಟು ಗಿರಾಕಿಗಳಿಗೆ ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದ್ದ. ತಪಾಸಣೆಯ ವೇಳೆ ಆತನ ಬಳಿ 180 ಗ್ರಾಂ ಗಾಂಜಾವನ್ನು ಪತ್ತೆಯಾಗಿರುತ್ತದೆ. ಗಾಂಜಾವನ್ನು ಆತನಿಗೆ ಬಂಟ್ವಾಳದ ಪಲ್ಲಮಜಲುವಿನ ಅಬ್ದುಲ್ ರಜಾಕ್ ರವರು ಗಿರಾಕಿಗಳಿಗೆ ಮಾರಾಟ ಮಾಡುವಂತೆ ತಿಳಿಸಿ ಕೊಟ್ಟಿರುತ್ತಾರೆ ಎಂಬುದಾಗಿ ತಿಳಿಸಿರುತ್ತಾನೆ. ಮುಂದಿನ ಕಾನೂನುಕ್ರಮಕ್ಕಾಗಿ ಆರೋಪಿತನನ್ನು ಸದ್ರಿ ಮಾದಕವಸ್ತು, ಆತನ ಬಳಿಯಿದ್ದ ದ್ವಿಚಕ್ರ ವಾಹನದೊಂದಿಗೆ ಸ್ವಾಧೀನಪಡಿಸಿ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 19/2026, ಕಲಂ: 8(C) r/w 20(b)(ii)(A) NARCOTIC DRUGS AND PSYCHOTROPIC SUBSTANCES ACT 1985 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular