ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟಕ್ಕೆ ತಂದಿದ್ದ ವ್ಯಕ್ತಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಉಮ್ಮರ್ ಶರೀಫ್,ಬಂಧಿತ ವ್ಯಕ್ತಿ. ಬೆಳ್ತಂಗಡಿ ಪೊಲೀಸ್ ಠಾಣೆಯ ಪಿ.ಎಸ್.ಐ ಆನಂದ ಎಂ ರವರು ಸಿಬ್ಬಂದಿಗಳೊಂದಿಗೆ ದಿನಾಂಕ 03-01-2026 ರಂದು ಸಂಜೆ 4ಗಂಟೆಯಿಂದ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಮದ್ದಡ್ಕ ಪೇಟೆಯ ಎಂ.ಎ ಕಾಂಪ್ಲೆಕ್ಸ್ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಬಿಳಿ ಬಣ್ಣದ ಕಾರಲ್ಲಿ ಅನುಮಾನಸ್ಪದವಾಗಿ ಕುಳಿತಿದ್ದ ಆರೋಪಿತ ಉಮ್ಮರ್ ಶರೀಫ್ ಎಂಬಾತನನ್ನು ವಿಚಾರಿಸಲಾಗಿ, ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟಕ್ಕೆ ತಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪಂಚರ ಸಮಕ್ಷಮ ಅಂಗಶೋಧನೆ ನಡೆಸಿದಾಗ, 4 ಸಿಗರೇಟ್ ಪ್ಯಾಕೆಟ್‌ಗಳೊಳಗೆ 8 ಪ್ಲಾಸ್ಟಿಕ್ ಕವರ್‌ಗಳಲ್ಲಿ ಎಂಡಿಎಂಎ ಪತ್ತೆಯಾಗಿದ್ದು, ತೂಕ 55.48 ಗ್ರಾಂ ಆಗಿದೆ. ಇದರ ಅಂದಾಜು ಮೌಲ್ಯ ರೂ.5,54,800 ಆಗಿರುತ್ತದೆ. ವಿಚಾರಣೆಯಲ್ಲಿ ಸದ್ರಿ ಮಾದಕ ವಸ್ತುವನ್ನು ನೌಷಾದ್ ಎಂಬಾತ ನೀಡಿರುವುದಾಗಿ ತಿಳಿಸಿದ್ದಾನೆ. ನಿಷೇಧಿತ ಮಾದಕ ವಸ್ತು ಸಾಗಾಟ ಹಾಗೂ ಮಾರಾಟಕ್ಕೆ ಬಳಸಿದ ಕೆಎ-19 ಎಂಜಿ-4669 ಕಾರಿನ ಅಂದಾಜು ಮೌಲ್ಯ 6,00,000 ಆಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ ಕ್ರ 01/2026 ಕಲಂ: 8(c) 22( c) NDPS Act ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



