ಪಿರಿಯಾಪಟ್ಟಣ: ಪಟ್ಟಣ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಾಡುಪ್ರಾಣಿಯ ಮಾಂಸವನ್ನು ಆಟೋದಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪಿರಿಯಾಪಟ್ಟಣ ಪ್ರಾದೇಶಿಕ ಅರಣ್ಯ ವಲಯ ವ್ಯಾಪ್ತಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.ಯ
ಪ್ರಾದೇಶಿಕ ಅರಣ್ಯ ವಲಯದ ವಿಶೇಷ ಕರ್ತವ್ಯ ಶಾಖ ವ್ಯಾಪ್ತಿಯ ಪಟ್ಟಣದ ಬಿ.ಎಂ ರಸ್ತೆಯ ಸಂತೆಮಾಳ ಬಳಿ ಅಕ್ರಮವಾಗಿ ಕಾಡು ಪ್ರಾಣಿಯ ಅಂದಾಜು 1 ಕೆ.ಜಿ ಮಾಂಸವನ್ನು ಆಟೊ ಸಂಖ್ಯೆ KA – 12 A – 1812 ರಲ್ಲಿ ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿದ ಅಧಿಕಾರಿಗಳು ತಾಲೂಕಿನ ಕೋಗಿಲವಾಡಿ ಗ್ರಾಮದ ಪುಟ್ಟೇಗೌಡ ಎಂಬ ವ್ಯಕ್ತಿಯನ್ನು ಬಂಧಿಸಿ ತಲೆಮರಿಸಿಕೊಂಡ ಅದೇ ಗ್ರಾಮದ ಮತ್ತೋರ್ವ ಆರೋಪಿ ರವಿ ಎಂಬಾತನ ಬಂಧನಕ್ಕೆ ವನ್ಯಜೀವಿ ಪ್ರಕರಣ ದಾಖಲಿಸಿ ಆಟೋ ಮತ್ತು ಕಾಡುಪ್ರಾಣಿ ಮಾಂಸ ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಪಿರಿಯಾಪಟ್ಟಣ ಪ್ರಾದೇಶಿಕ ಅರಣ್ಯ ವಲಯದ ಅರಣ್ಯಾಧಿಕಾರಿ ಕಿರಣ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಮಹೇಶ್, ಅರಣ್ಯ ರಕ್ಷಕರಾದ ಹರೀಶ್, ಪೃಥ್ವಿ, ಪೂರ್ಣಿಮಾ ಇದ್ದರು.