ಚಾಮರಾಜನಗರ: ಕರ್ನಾಟಕದ ಕಾಡಾನೆ ದಾಳಿಯಿಂದ ಕೇರಳದಲ್ಲಿ ವ್ಯಕ್ತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಘೋಷಿಸಿದ್ದ 15 ಲಕ್ಷ ರೂ. ಪರಿಹಾರವನ್ನು ಕೇರಳದ ಸಂತ್ರಸ್ತ ಕುಟುಂಬ ಪರಿಹಾರ ತಿರಸ್ಕರಿಸಿದೆ ಎಂದು ಬಂಡೀಪುರದಲ್ಲಿ ಅರಣ್ಯ ಇಲಾಖೆಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಮಾನವೀಯತೆ ದೃಷ್ಟಿಯಿಂದ ಪರಿಹಾರ ಘೋಷಣೆ ಮಾಡಿದ್ದೆವು. ಆದರೆ ಪರಿಹಾರ ನೀಡಲು ಬಿಜೆಪಿ ವಿರೋಧ ಮಾಡಿತ್ತು. ಬಿಜೆಪಿ ವಿರೋಧ ಮಾಡಿದ್ದಕ್ಕೆ ನಮಗೆ ಪರಿಹಾರ ಬೇಕಿಲ್ಲ ಅಂತಾ ಕೇರಳದ ಸಂತ್ರಸ್ತನ ಕುಟುಂಬ ತಿರಸ್ಕರಿಸಿದೆ ಎಂದಿದ್ದಾರೆ.