Saturday, April 19, 2025
Google search engine

Homeರಾಜ್ಯಪಾರ್ಟಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ: ವ್ಯಕ್ತಿಗೆ 10 ವರ್ಷ ಕಠಿಣ ಜೈಲು

ಪಾರ್ಟಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ: ವ್ಯಕ್ತಿಗೆ 10 ವರ್ಷ ಕಠಿಣ ಜೈಲು

ಮಂಗಳೂರು: ಪಾರ್ಟಿ ಮುಗಿಸಿ ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ 10 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ

ಮಂಗಳೂರು ನಿವಾಸಿ ಬ್ರಿಯಾನ್ ರಿಚರ್ಡ್ ಅಮನ್ನಾ (34) ಎಂಬಾತನಿಗೆ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ 10 ಸಾವಿರ ರೂ.ದಂಡ ವಿಧಿಸಲಾಗಿದೆ. 2021ರ ಫೆಬ್ರವರಿ 5ರಂದು ಪುತ್ತೂರಿನ ಮನೆಯೊಂದರಲ್ಲಿ ಸ್ನೇಹಿತೆ ಆಯೋಜಿಸಿದ್ದ ಪಾರ್ಟಿಗೆ ಸಂತ್ರಸ್ತೆಯನ್ನು ಆಹ್ವಾನಿಸಲಾಗಿತ್ತು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಚೌಧರಿ ಮೋತಿಲಾಲ್ ತಿಳಿಸಿದ್ದಾರೆ.

ಮಹಿಳೆಯ ಮೇಲೆ ಅತ್ಯಾಚಾರ ಎಸಗುವ ಉದ್ದೇಶದಿಂದ ಅಮನ್ನಾ ಆಕೆಗೆ ಡ್ರಗ್ಸ್ ನೀಡಿದ್ದ. ಫೆಬ್ರವರಿ 6, 2021 ರ ಮುಂಜಾನೆ ಪಾರ್ಟಿಯ ನಂತರ ಕೋಣೆಯಲ್ಲಿ ಮಲಗಿದ್ದಾಗ ಅಮನ್ನಾ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳ ಆರೋಪಿಸಿದ್ದರು.

ಈ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 328 ಮತ್ತು 376ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕಾಂತರಾಜು ಎಸ್.ವಿ., 21 ಸಾಕ್ಷಿಗಳು, 37 ದಾಖಲೆಗಳು ಹಾಗೂ ಅಪರಾಧಕ್ಕೆ ಸಂಬಂಧಿಸಿದ 6 ವಸ್ತುಗಳನ್ನು ವಿಚಾರಣೆ ನಡೆಸಿದರು. ಸೆಕ್ಷನ್ 32 ರ ಅಡಿಯಲ್ಲಿ ಆರೋಪಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 5,000 ರೂ.ಗಳ ದಂಡವನ್ನು ನ್ಯಾಯಾಲಯ ವಿಧಿಸಿದೆ

RELATED ARTICLES
- Advertisment -
Google search engine

Most Popular