ಮಂಗಳೂರು(ದಕ್ಷಿಣ ಕನ್ನಡ): ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎಯನ್ನು ಹೊಂದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರೋ ಘಟನೆ ಮಂಗಳೂರಿನ ವಾಮಂಜೂರಲ್ಲಿ ನಡೆದಿದೆ.
ಬಂಧಿತ ವ್ಯಕ್ತಿಯನ್ನು ದಾವೂದು ಪರ್ವೇಜ್ ಎಂದು ಗುರುತಿಸಲಾಗಿದೆ.
ಮಂಗಳೂರು ಪೊಲೀಸ್ ಆಯುಕ್ತರ ನಿರ್ದೇಶನದಂತೆ ಉಪ-ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಂಗಳೂರು ತಾಲೂಕು ವಾಮಂಜೂರು ಮೈದಾನದಲ್ಲಿರುವ ಶೇಂದಿ ಅಂಗಡಿ ಬಳಿ ಆರೋಪಿತನನ್ನು ವಶಕ್ಕೆ ಪಡೆಯಲಾಗಿದೆ.
ಅಲ್ದೇ ನಿಷೇಧಿತ ಮಾದಕ ವಸ್ತು ಸುಮಾರು 10 ಗ್ರಾಂ ತೂಕದ MDMA (ಅಂದಾಜು ಮೌಲ್ಯ 15,000) ಹಾಗೂ 810 ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಈ ದಾಳಿಯಲ್ಲಿ ಧನ್ಯ.ಎನ್.ನಾಯಕ ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ದಕ್ಷಿಣ ಉಪವಿಭಾಗರವರ ನೇತೃತ್ವದ Anti-Drug Team ನ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್‍ಐ ಅರುಣ್ ಕುಮಾರ್ ಡಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.