Saturday, April 19, 2025
Google search engine

Homeರಾಜ್ಯಸುದ್ದಿಜಾಲಮನುಷ್ಯನಿಗೆ ಬಾಲ್ಯ, ಯೌವನ, ವೃದ್ಧಾಪ್ಯ ಬರಲೇಬೇಕು ಇದು ಸೃಷ್ಟಿ ನಿಯಮ: ಪಿ.ಎನ್ ಲೋಕೇಶ್

ಮನುಷ್ಯನಿಗೆ ಬಾಲ್ಯ, ಯೌವನ, ವೃದ್ಧಾಪ್ಯ ಬರಲೇಬೇಕು ಇದು ಸೃಷ್ಟಿ ನಿಯಮ: ಪಿ.ಎನ್ ಲೋಕೇಶ್

ದಾವಣಗೆರೆ: ಮನುಷ್ಯನ ಜೀವನಕ್ರಮದಲ್ಲಿ ನಮ್ಮನ್ನು ನಾವು ಹೊಂದಾಣಿಕೆ ಮಾಡಿಕೊಂಡು ಕಾಲಕ್ಕೆ ತಕ್ಕಂತೆ ಹೋದಾಗ ಮಾತ್ರ ಸಂತೋಷದ ಬದುಕನ್ನು ಕಟ್ಟಿಕೊಡಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ತಿಳಿಸಿದರು.

ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಶೇಷ ಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಎಸ್.ಎಸ್.ಕೆ.ಟ್ರಸ್ಟ್, ಜಿಲ್ಲಾ ಹಿರಿಯ ನಾಗರೀಕರ ಸಂಘ(ರಿ), ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘ (ರಿ), ಆದರ್ಶ ಸಮಾಜ ಕಾರ್ಯ ಸಂಸ್ಥೆ (ರಿ) ಹಾಗೂ ಜಿಲ್ಲೆಯಲ್ಲಿ ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಘ ಸಂಸ್ಥೆಗಳ ಇವರ ಸಹಯೋಗದೊಂದಿಗೆ ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ನಡೆದ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತು ಬದಲಾದಂತೆ ಪರಿಸರವೂ ಕೂಡ ಬದಲಾಗುತ್ತಿದೆ, ಇದೇ ಜಗದ ನಿಯಮ, ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಹುಟ್ಟಿದ ಮೇಲೆ ಬಾಲ್ಯ, ಯೌವನ, ವೃದ್ಧಾಪ್ಯವನ್ನು ಕಾಣಲೇ ಬೇಕಾಗಿರುತ್ತದೆ. ಆದ್ದರಿಂದ ಜೀವನದ ಎಲ್ಲಾ ಹಂತದಲ್ಲೂ ನಮ್ಮನ್ನು ನಾವು ಹೊಂದಾಣಿಕೆ ಮಾಡಿಕೊಂಡಾಗ ಜೀವನದಲ್ಲಿ ಸಂತೋಷವನ್ನು ಕಾಣಬಹುದು.
ಸಮಾಜದಲ್ಲಿ ಹಿರಿಯರ ಕೊಡುಗೆಗಳು ಅಪಾರವಾದುವು, ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಜೀವನದಲ್ಲಿ ಹಿರಿಯರ ಮಾರ್ಗದರ್ಶನವನ್ನು ಅಳವಡಿಸಿಕೊಂಡಾಗ ಅರ್ಥಪೂರ್ಣವಾದ ಬದುಕು ಕಟ್ಟಿಕೊಳ್ಳಬಹುದು. ಹಿರಿಯ ನಾಗರೀಕರು ಸರ್ಕಾರಕ್ಕೆ ಮನವಿ ಮಾಡುವ ಮೂಲಕ ತಮ್ಮ ಸೌಕರ್ಯಗಳನ್ನು ಪಡೆದುಕೊಳ್ಳಬೇಕಾಗಿದೆ ಎಂದರು.

ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ದೊಡ್ಡ ಬಾತಿಯ ಮೈತ್ರಿ ವೃದ್ಧಾಶ್ರಮ, ಹರಿಹರ ಗುತ್ತೂರು ಕಾಲೋನಿಯ ಶಕ್ತಿ ವೃದ್ಧಾಶ್ರಮ ಮಾಯಕೊಂಡ ಸಮೀಪದ ವೃದ್ಧಾಶ್ರಮ ಒಟ್ಟು ಮೂರೂ ಕೇಂದ್ರ ಸರ್ಕಾರದ ವೃದ್ಧಾಶ್ರಮಗಳು ಕಾರ್ಯನಿರ್ವಹಿಸುತ್ತಿವೆ ಎಂದರು. ಎಸ್.ಎಸ್ ಕೇರ್ ಟ್ರಸ್ಟ್ ವತಿಯಿಂದ ಹಿರಿಯ ನಾಗರೀಕರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು. ಹಾಗೂ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 24 ರಂದು ಹಿರಿಯ ನಾಗರೀಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗಿತು.

ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಭರತ್‍ರಾಜ್, ಜಿಲ್ಲಾ ಹಿರಿಯ ನಾಗರೀಕರ ಸಂಘ(ರಿ) ಅಧ್ಯಕ್ಷ ಎಸ್.ಟಿ ಕುಸುಮ ಶ್ರೇಷ್ಟಿ, ಕಾರ್ಯದರ್ಶಿಗಳಾದ ಎಸ್ ಗುರುಮೂರ್ತಿ, ಶತಾಯುಷಿಗಳಾದ ಈಶ್ವರ ಆಚಾರ್ಯ, ನಂಜಪ್ಪ ಹಾಗೂ ಮಹಮ್ಮದ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular