Thursday, July 10, 2025
Google search engine

Homeರಾಜ್ಯಕೆ.ಆರ್.ನಗರ ಪುರಸಭೆಗೆ ವಾಣಿಜ್ಯ ಮಳಿಗೆಗಳಿಂದ ಉಂಟಾದ ನಷ್ಟಕ್ಕೆ ಆಡಳಿತ ಮಂಡಳಿ, ಮುಖ್ಯಾಧಿಕಾರಿ ನೇರಹೊಣೆ: ರುದ್ರೇಶ್ ಆರೋಪ

ಕೆ.ಆರ್.ನಗರ ಪುರಸಭೆಗೆ ವಾಣಿಜ್ಯ ಮಳಿಗೆಗಳಿಂದ ಉಂಟಾದ ನಷ್ಟಕ್ಕೆ ಆಡಳಿತ ಮಂಡಳಿ, ಮುಖ್ಯಾಧಿಕಾರಿ ನೇರಹೊಣೆ: ರುದ್ರೇಶ್ ಆರೋಪ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಕೆ.ಆರ್.ನಗರ ಪುರಸಭೆಗೆ ವಾಣಿಜ್ಯ ಮಳಿಗೆಗಳಿಂದ ಲಕ್ಷಾಂತರ ರೂ ನಷ್ಟವುಂಟಾಗಿದ್ದು ಇದಕ್ಕೆ ಪುರಸಭಾ ಆಡಳಿತ ಮಂಡಳಿ ಹಾಗೂ ಪುರಸಭಾ ಮುಖ್ಯಾಧಿಕಾರಿ ಅವರೇ ನೇರಹೊಣೆ ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರುದ್ರೇಶ್ ಆರೋಪಿಸಿದ್ದಾರೆ.

  ಕೆ.ಆರ್.ನಗರ ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಒಂದು ತಿಂಗಳು ಕಳೆದರೂ ಕೂಡ ಪುರಸಭಾ ವಾಣಿಜ್ಯ ಮಳಿಗೆಯ ೨೪ ಲಕ್ಷ ರೂಪಾಯಿ ನಷ್ಟವುಂಟಾಗಿದ್ದು ಈ ನಷ್ಟಕ್ಕೆ ಪುರಸಭಾ ಆಡಳಿತ ಮಂಡಳಿ ಮತ್ತು ಪುರಸಭಾ ಮುಖ್ಯ ಅಧಿಕಾರಿಗಳಾದ ಡಾ.ಜಯಣ್ಣ ಅವರೇ ಕಾರಣ ಹಾಗಾಗಿ ಇದರ ನಷ್ಟವನ್ನು ಜಯಣ್ಣ ಅವರೇ ದಂಡವನ್ನು  ಪುರಸಭೆಗೆ ಕಟ್ಟಬೇಕು ಇಲ್ಲವಾದಲ್ಲಿ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಇದ್ದಕ್ಕೆ ಕಾರಣ ಅನ್‌ ಲೈನ್ ಮೂಲಕ ನಡೆದ ಬಿಡ್‌ನಲ್ಲಿ ಕೂಗಿದವರಿಗೆ ಮಳಿಗೆ ನೀಡಿದ್ದರೆ ಪುರಸಭೆಗೆ ಈಗಾಗಲೇ ಸಾಕಷ್ಟು ಆದಾಯ ಬರುತ್ತಿತ್ತು ಅದರೆ ಹಳೆ ಮಳಿಗೆಗಳಿಂದ ಒಂದು ತಿಂಗಳಿಗೆ ೩ ರಿಂದ ೪ ಲಕ್ಷ ಆದಾಯ ಬರುತ್ತಿತ್ತು. ಈಗ ಉತ್ತಮ ಲಾಭ ಬರುವುದಿದ್ದರೂ ಕೂಡ ಹಳೆ ಮಳಿಗೆಯವರ ಮೇಲೆ ಯಾಕೆ ಅತಿಯಾದ ಪ್ರೀತಿ ತೋರಿಸುತ್ತಿದ್ದಾರೆ ಎಂದು ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ ಎಂದರು.

ಶಾಸಕರಾದ ಡಿ.ರವಿಶಂಕರ್ ರವರು ಈ ಪುರಸಭಾ ಮಳಿಗೆಗಳ ವಿಚಾರವಾಗಿ ಇತ್ತೀಚೆಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಮಳಿಗೆ ವಿಚಾರವಾಗಿ ನಾನು ಹಣ ಪಡೆದಿಲ್ಲ ಅಂತ ಹೇಳಿದ್ದಾರೆ ಹೊರತು ಇದರಲ್ಲಿ ಸರಿ ಯಾವುದು ತಪ್ಪು ಯಾವುದು ಜೊತೆಗೆ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನವನ್ನು ಮಾಡಿಲ್ಲ ಎಂದರು ಶಾಸಕರ ವಿರುದ್ದ ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿಘೋಷ್ಠಿಯಲ್ಲಿ ಜೆಡಿಎಸ್ ನಗರ ಪ್ರಧಾನ ಕಾರ್ಯದರ್ಶಿ ಜಿ.ಪಿ.ಮಂಜು, ತಾಲ್ಲೂಕು ಬಿಜೆಪಿ ಅಧ್ಯಕ್ಷ ಹೊಸೂರು ಧರ್ಮ, ಮೈಸೂರು ಜಿಲ್ಲಾ ಜೆಡಿಎಸ್ ಮಹಿಳಾ ಅಧ್ಯಕ್ಷರು ದ್ರಾಕ್ಷಾಯಿಣಿ, ಮಾಜಿ ಪುರಸಭಾ ಸದಸ್ಯರಾದ ರಂಗಸ್ವಾಮಿ ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular