Friday, April 18, 2025
Google search engine

Homeರಾಜ್ಯಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಕಡ್ಡಾಯ ವಸ್ತ್ರಸಂಹಿತೆ

ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಕಡ್ಡಾಯ ವಸ್ತ್ರಸಂಹಿತೆ

ಶೃಂಗೇರಿ: ಶೃಂಗೇರಿ ಶ್ರೀ ಶಾರದಾ ಪೀಠವು ಆಗಸ್ಟ್ 15 – 2024 ರಿಂದ ಶ್ರೀ ಶಾರದಮ್ಮನವರ ದರ್ಶನಕ್ಕೆ ಹಾಗೂ ಗುರುಗಳ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಕಡ್ಡಾಯವಾಗಿ ಭಾರತೀಯ ಸಂಪ್ರದಾಯಿಕ ಉಡುಗೆಯಲ್ಲಿ ಬರುವಂತೆ ಸೂಚಿಸಿ ಆಡಳಿತಾಧಿಕಾರಿಗಳು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತೀಯ ಸಾಂಪ್ರದಾಯಕವಲ್ಲದ ಉಡುಗೆಯನ್ನು ತೊಟ್ಟು ಬಂದವರಿಗೆ ಶ್ರೀ ಶಾರದಾಂಬೆ ದೇವಸ್ಥಾನದ ಅರ್ಧ ಮಂಟಪದ ಒಳಗೆ ಪ್ರವೇಶವಿರುವುದಿಲ್ಲ. ಅಂತವರು ಹೊರಗಿನ ಪ್ರಕಾರದಿಂದಲೇ ದೇವರ ದರ್ಶನವನ್ನು ಪಡೆಯಬೇಕಾಗುತ್ತದೆ.

ಪುರುಷರಾದಲ್ಲಿ ಧೋತಿ ಶಲ್ಯ ಮತ್ತು ಉತ್ತರೀಯ ಹಾಗೂ ಮಹಿಳೆಯರು ಸೀರೆ ರವಿಕೆ, ಸಲ್ವಾರ್ – ದುಪಟ್ಟ ಅಥವಾ ಲಂಗ ದಾವಣಿಗಳಂತ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ದೇವರ ದರ್ಶನ ಮಾಡಬಹುದು.

ಶೃಂಗೇರಿ ಮಠದ ಈ ಆದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಕ್ತರು ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಅರ್ಧಂಬರ್ಧ ಬಟ್ಟೆ ತೊಟ್ಟು ಕೆಲವು ಬುದ್ಧಿಹೀನರು ಪಿಕ್ನಿಕ್ ಸ್ಪಾಟ್ ನಂತೆ ದೇವಾಲಯಗಳನ್ನು ಪ್ರವೇಶಿಸುತ್ತಾರೆ. ಇಂತಹ ನಿಯಮಗಳಿಂದ ಅದಕ್ಕೆ ಕಡಿವಾಣ ಹಾಕಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular