ಬೆಳ್ತಂಗಡಿ ತಾಲೂಕಿನ ರೇಖ್ಯಾ ಗ್ರಾಮದ ನೇಲ್ಯಡ್ಕದ ಮಲೆನಾಡು ಹೋಟೇಲಿನಲ್ಲಿ ಕೆಲಸಕ್ಕಿದ್ದ ಸುಮಾರು 40-45 ವರ್ಷ ಪ್ರಾಯದ ದಾವಣಗೆರೆ ಮೂಲದ ಹನುಮಂತಪ್ಪ ಎಂಬವರು ಮೃತಪಟ್ಟಿದ್ದು, ಮೃತದೇಹವನ್ನು ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಶೀತಲಿಕರಣ ಶವಗಾರದಲ್ಲಿ ಇರಿಸಲಾಗಿದೆ.
ಚಹರೆ : ಎತ್ತರ 5.8 ಅಡಿ, ಸಾಧಾರಣ ಶರೀರ, ಗೋಧಿ ಮೈಬಣ್ಣ, ಮುಖದಲ್ಲಿ ಕಪ್ಪು ಗಡ್ಡ-ಮೀಸೆ, ತಲೆಯಲ್ಲಿ ಕಪ್ಪು ಕೂದಲು, ಹೊಟ್ಟೆಯ ಎಡಭಾಗದಲ್ಲಿ ಕಪ್ಪು ಎಳ್ಳು ಮಚ್ಚೆ ಹಾಗೂ ಎದೆಯ ಎಡಭಾಗದಲ್ಲಿ ಕಪ್ಪುಗುಳ್ಳೆಯಂತಿರುವ ಕಪ್ಪು ಮಚ್ಚೆ ಗುರುತುಗಳು ಇರುತ್ತದೆ. ಮೃತದೇಹದ ಮೈಮೇಲೆ ನೇರಳೆ ಬಣ್ಣದ ಉದ್ದ ತೋಳಿನ ಶರ್ಟ್, ನೀಲಿ ಬಣ್ಣದಲ್ಲಿ ಕೆಂಪು ಚೌಕುಳಿಗಳಿರುವ ಲುಂಗಿ ಧರಿಸಿದ್ದರು.
ಮೃತದೇಹದ ಗುರುತು ಪತ್ತೆಯಾದಲ್ಲಿ ಧರ್ಮಸ್ಥಳ ಪೆÇಲೀಸು ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಶಂಶೀರ್ ಬುಡೋಳಿ



