ಮಂಡ್ಯ: ಇದ್ದಕ್ಕಿದ್ದಂತೆ ಕುಸಿದು 3 ರಾಸುಗಳ ಸಾವು, 10 ಕ್ಕೂ ಹೆಚ್ಚು ರಾಸುಗಳು ಅಸ್ವಸ್ಥಗೊಂಡಿರುವ ಘಟನೆ ಮಂಡ್ಯ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ನಡೆದಿದೆ.
ರೈತ ಸೋಮಶೇಖರ್ ಎಂಬುವರಿಗೆ ಸೇರಿದ ರಾಸುಗಳು ಸಾವನ್ನಪ್ಪಿದ್ದು, ರೈತ ಕುಟುಂಬ ಕಂಗಾಲಾಗಿದ್ದು, ಕಣ್ಣೀರಿಟ್ಟಿದ್ದಾರೆ.

ಅಸ್ವಸ್ಥ ರಾಸುಗಳಿಗೆ ಪಶು ವೈದ್ಯರು ಸ್ಥಳದಲ್ಲಿ ಚಿಕಿತ್ಸೆ ನೀಡಿದ್ದಾರೆ. ರಾಸುಗಳ ವಿಷ ಆಹಾರ ಸೇವನೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.