ಮಂಡ್ಯ: ಸಕ್ಕರೆನಾಡು ಮಂಡ್ಯದ ಚಟ್ಟೇನಹಳ್ಳಿ ಗ್ರಾಮದಲ್ಲಿ ಅಚ್ಚರಿಯ ವಿಸ್ಮಯಕಾರಿ ಘಟನೆ ನಡೆದಿದ್ದು, ಎಮ್ಮೆಯೊಂದು 8 ಕಾಲು ಎರಡು ತಲೆಯುಳ್ಳ ಕರುವಿಗೆ ಜನ್ಮ ನೀಡಿದೆ. ಆದರೆ ದುರಾದೃಷ್ಟವಶಾತ್ ಕರು ಸಾವನ್ನಪ್ಪಿದೆ.
ಗ್ರಾಮದ ರೈತ ಶಿವಲಿಂಗಯ್ಯ ಎಂಬುವವರಿಗೆ ಸೇರಿದ ಎಮ್ಮೆ ನೆನ್ನೆ ಕರುವಿಗೆ ಜನ್ಮ ನೀಡಿದ್ದು, ಎಂಟು ಕಾಲು, ಎರಡು ತಲೆ, ಎರಡು ಬಾಲವನ್ನು ಹೊಂದಿದೆ.
ಆದರೆ ಕರು ಎಮ್ಮೆಯ ಹೊಟ್ಟೆಯಲ್ಲೇ ಸಾವನ್ನಪ್ಪಿದೆ.
ಎಮ್ಮೆ ಕರು ಹಾಕಲು ಹರಸಾಹಸ ಪಟ್ಟಿತ್ತು ಬಳಿಕ, ಸ್ಥಳಕ್ಕೆ ಪಶು ವೈದ್ಯರನ್ನು ಬಂದು, ಎಮ್ಮೆಗೆ ಹೆರಿಗೆ ಮಾಡಿಸಲು ಯತ್ನಿಸಿದರು.
ಬಳಿಕ ಶಸ್ತ್ರಚಿಕಿತ್ಸೆಯ ಮೂಲಕ ಕರುವನ್ನು ಹೊರ ತೆಗೆಯಲಾಗಿದೆ. ಆದರೆ ಆ ವೇಳೆಗೆ ಕರು ಸಾವನ್ನಪ್ಪಿದೆ.