ಮಂಡ್ಯ: ನೆಚ್ಚಿನ ನಾಯಕ ಎಚ್ ಡಿ ಕುಮಾರಸ್ವಾಮಿ ಸಂಸದ ಹಾಗೂ ಕೇಂದ್ರ ಸಚಿವರಾದ ಹಿನ್ನೆಲೆ ಮಂಡ್ಯ ಜಿಲ್ಲೆ, ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ಜೆಡಿಎಸ್ ಮುಖಂಡ ಸಾಯಿ ಪ್ರಸನ್ನ ಎಚ್ಡಿಕೆಗೆ ಭರ್ಜರಿ ಉಡುಗೊರೆ ನೀಡಿದ್ದಾರೆ .

ಸುಮಾರು 80,000 ಬೆಲೆಬಾಳುವ ರೋಸ್ ವುಡ್ ಚೇರ್ ಗಿಪ್ಟ್ ಮಾಡಿದ್ದಾರೆ. ಮಂಡ್ಯಕ್ಕೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಆಗಮಿಸಿದ ವೇಳೆ ಗ್ರಾಮದ ಬಳಿ ಜೆಡಿಎಸ್ ಮುಖಂಡ ಸಾಯಿ ಪ್ರಸನ್ನ ಗಿಪ್ಟ್ ಮಾಡಿದ್ದಾರೆ. ಸಾಯಿ ಪ್ರಸನ್ನ ಎಚ್ಡಿಕೆ ಅಭಿಮಾನಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ.
ರೋಸ್ ವುಡ್ ಚೇರ್ ವಿಶೇಷತೆ ಎಂದರೆ ಗಂಡಭೇರುಂಡ, ರಾಜ ಲಾಂಛನ, ಆಮೆಯ ಸುಂದರ ಕೆತ್ತನೆ ಇರುವ ಚೇರ್ ಇದಾಗಿದ್ದು ,ಚೇರ್ ಮೇಲೆ ಕೂರಲು ಎಚ್ಡಿಕೆಗೆ ಮನವಿ ಮಾಡಿದ್ದಾರೆ. ಆದರೆ ಸಮಯದ ಅಭಾವದಿಂದ ಮುಂದೊಂದು ದಿನ ಆಸೆ ಈಡೇರಿಸುದಾಗಿ ಭರವಸೆ ನೀಡಿ, ತಮ್ಮ ಬದಲಾಗಿ ನಿಖಿಲ್ರನ್ನು ಎಚ್ಡಿಕೆ ಚೇರ್ ಮೇಲೆ ಕೂರಿಸಿದ್ದಾರೆ ,ನಂತರ ವಾಹನದ ಮೇಲೆ ಕರೆಸಿ ಮುಖಂಡ ಸಾಯಿ ಪ್ರಸನ್ನ ರನ್ನು ಎಚ್ಡಿಕೆ ಸಮಾಧಾನ ಪಡಿಸಿದ್ದಾರೆ.