ಮದ್ದೂರು: ತಾಲೂಕಿನ ತೈಲೂರು ಗ್ರಾಮದ ಕನ್ನಡ ಜ್ಯೋತಿ ಯುವಕರ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲೆಯ ಎಡಿಸಿ ಡಾ.ಹೆಚ್.ಎಲ್ ನಾಗರಾಜರವರಿಗೆ ಕನ್ನಡ ಜ್ಯೋತಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.
ಈ ವೇಳೆ ಮಾತನಾಡಿದ ಎಡಿಸಿ ನಾಗರಾಜ್ ಕರ್ನಾಟಕ ಏಕೀಕರಣಗೊಂಡು ಮೈಸೂರು ರಾಜ್ಯವನ್ನ ಕರ್ನಾಟಕ ರಾಜ್ಯ ಎಂದು ಮರು ನಾಮಕರಣ ಮಾಡಿ 50 ವರ್ಷ ತುಂಬಿದ್ದ ಹಿನ್ನೆಲೆ ಇಂದು ನಾವು ಕರ್ನಾಟಕ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿದ್ದೇವೆ.
ಕರ್ನಾಟಕ ರಾಜ್ಯೋತ್ಸವವನ್ನು ಕನ್ನಡಿಗರಷ್ಟೇ ಆಚರಿಸುವುದಲ್ಲ ಕರ್ನಾಟಕದಲ್ಲಿ ವಾಸವಿರುವ ಯಾವುದೇ ರಾಜ್ಯದ ಅನ್ಯ ಭಾಷೆಯರೂ ಕೂಡ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಬೇಕು ಎಂದರು.
ಕಳೆದ 10 ವರ್ಷಗಳ ಹಿಂದೆ ನಾನು ಮದ್ದೂರಿನ ತಾಹಸಿಲ್ದಾರ್ ಆಗಿದ್ದ ಸಂದರ್ಭ ಎಂಟು ತಿಂಗಳುಗಳ ಕಾಲ ಇಲ್ಲಿ ಕಾರ್ಯನಿರ್ವಹಿಸಿದೆ ಆ ಸಂದರ್ಭದಲ್ಲಿ ರೈತರ ಕೆಲಸಗಳನ್ನು ಮಾಡಲು ನನಗೆ ಕಾಲಾವಕಾಶ ಸಿಕ್ಕಿಲ್ಲ ಪ್ರತಿನಿತ್ಯ ಮರಳು ದಂಧೆ ಕೋರರ ಹಿಂದೆ ಬೀಳುವ ಕೆಲಸವೇ ಆಗಿತ್ತು ಆಗ ರೈತರ ಕೆಲಸ ಮಾಡಲು ಕಾಲಾವಕಾಶವಿದ್ದರೆ ರೈತರ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸುತ್ತಿದ್ದೇನೆ ಎಂದರು. ಮುಖ್ಯಮಂತ್ರಿಗಳಾದ
ಸಿದ್ದರಾಮಯ್ಯರವರು ಹಂಪಿಯಲ್ಲಿ ನವಂಬರ್ ಒಂದರಂದು ಕರ್ನಾಟಕ ರಾಜ್ಯೋತ್ಸವ ರಥಕ್ಕೆ ಚಾಲನೆ ನೀಡಿದ್ದಾರೆ ಅದು ಎಲ್ಲಾ ತಾಲೂಕುಗಳಿಗೆ ತೆರಳಿ, ಮಂಡ್ಯಕ್ಕೂ ಕೂಡ ಆಗಮಿಸುತ್ತದೆ ಆ ಸಂದರ್ಭದಲ್ಲಿ ಮದ್ದೂರು ತಾಲೂಕಿನ ಜವಾಬ್ದಾರಿಯನ್ನ ಕನ್ನಡ ಜೋತಿ ಯುವಕರ ಸಂಘದ ಪದಾಧಿಕಾರಿಗಳೇ ನಿರ್ವಹಿಸಬೇಕು ಎಂದರು.
ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 5 ಜನ ಸನ್ಮಾನಿತರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ತೈಲೂರು ವೆಂಕಟ ಕೃಷ್ಣ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕನ್ನಡ ಜ್ಯೋತಿ ಯುವಕರ ಸಂಘದ ಅಧ್ಯಕ್ಷ ತೈಲೂರು ಸಿದ್ದರಾಜು, ಆನಂದ ಚಾರಿ, ರಘು, ಡಾ. ಆನಂದ್, ವಕೀಲ ಸತ್ಯಾನಂದ ಸೇರಿದಂತೆ ಇತರರು ಹಾಜರಿದ್ದರು.