ಮಂಡ್ಯ: ನಾಲೆಗೆ ಕಾರು ಬಿದ್ದು ಐವರ ಸಾವು ಪ್ರಕರಣದ ಬಳಿಕ ಜಿಲ್ಲಾಡಳಿತ ಕೊನೆಗೂ ಎಚ್ಚೆತ್ತುಕೊಂಡಿದ್ದು, ಘಟನೆ ನಡೆದ ಸ್ಥಳದಲ್ಲಿ ಸೇತುವೆ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಂಡಿದೆ.

ಅಪಘಾತದಿಂದ ಸೇತುವೆ ತಡೆಗೋಡೆ ಕುಸಿದಿತ್ತು. ಸೇತುವೆ ತಡೆಗೋಡೆ ಜೊತೆಗೆ ಕಬ್ಬಿಣದ ತಡೆಗೋಡೆಯನ್ನು ನಿರ್ಮಾಣ ಮಾಡಲಾಗುತ್ತಿದೆ.
ಶಾಸಕ ದರ್ಶನ್ ಪುಟ್ಟಣ್ಣಯ್ಯರಿಂದ ತಡೆಗೋಡೆ ಕಾಮಗಾರಿ ಪರಿಶೀಲನೆ ನಡೆಸಲಾಗಿದೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬನಘಟ್ಟ ಗ್ರಾಮ ಬಳಿ ಅಪಘಾತ ಸಂಭವಿಸಿ, ಐವರು ಸಾವನ್ನಪ್ಪಿದ್ದರು. ಕಿರಿದಾದ ರಸ್ತೆ, ತೀವ್ರ ತಿರುವು ಹಿನ್ನೆಲೆ ಪದೇ ಪದೇ ಅಪಘಾತ ಸಂಭವಿಸುತ್ತಿದೆ. ಈ ಹಿನ್ನಲೆ ತಡೆಗೋಡೆ ನಿರ್ಮಾಣದ ಮೂಲಕ ಅಪಘಾತ ನಿಯಂತ್ರಣಕ್ಕೆ ಜಿಲ್ಲಾಡಳಿತ ಮುಂದಾಗಿದೆ.