ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಹಿನ್ನಲೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಕಾವೇರಿ ಮಾತೆಗೆ ಹಾಲಿನ ಅಭಿಷೇಕ ಮಾಡಲಾಗಿದೆ.
ಸುಪ್ರೀಂ ತೀರ್ಪು ಕನ್ನಡಿಗರ ಪರ ಬರಲೆಂದು ಪ್ರಾರ್ಥಿಸಿ ಮಂಡ್ಯದ ಡಿಸಿ ಕಚೇರಿ ಸಮೀಪದ ಕಾವೇರಿ ಪ್ರತಿಮೆಗೆ ಹಾಲು-ಮೋಸರು, ಕುಂಕುಮ,ಅರಿಸಿಣ, ಎಳೆನೀರು, ಜೇನುತುಪ್ಪದಿಂದ ಕಾವೇರಿ ಮಾತೆಗೆ ಬಿಂದಿಗೆಯಲ್ಲಿ ಅಭಿಷೇಕ ಮಾಡಲಾಗಿದೆ.
ಇದೇ ವೇಳೆ ಕಾವೇರಿ ಪ್ರತಿಮೆ ಬಳಿ ಖಾಲಿ ಬಿಂದಿಗೆ ಇಟ್ಟು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾವೇರಿ ತೀರ್ಪು ನಮ್ಮ ಪರ ಬರಲಿ. ರಾಜ್ಯ ಸರ್ಕಾರ ಯಾವುದೇ ರೀತಿಯ ನಿಲುವನ್ನು ತೆಗೆದುಕೊಳ್ಳುತ್ತಿಲ್ಲ. ತಕ್ಷಣವೇ ನಮ್ಮ ನೀರು ತಮಿಳುನಾಡಿಗೆ ಹೋಗುತ್ತಿರುವುದನ್ನು ನಿಲ್ಲಿಸಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.