Friday, April 18, 2025
Google search engine

Homeರಾಜ್ಯಮಂಡ್ಯ: ಕೆಆರ್‌ಎಸ್‌ನ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿಷೇಧ

ಮಂಡ್ಯ: ಕೆಆರ್‌ಎಸ್‌ನ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿಷೇಧ

ಮಂಡ್ಯ: ಕೆಆರ್‌ಎಸ್‌ ಸುತ್ತಲೂ ಗಣಿಗಾರಿಕೆ ನಿಷೇಧಿಸುವಂತೆ ಹೈಕೋರ್ಟ್‌ ತೀರ್ಪು ನೀಡಿದ ಬೆನ್ನಲ್ಲೇ ಜಲಾಶಯದ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸದಂತೆ ಆದೇಶ ಹೊರಡಿಸಲಾಗಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಅಧಿಕಾರಿಗಳು ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಡ್ಯಾಂನಿಂದ 20 ಕಿ.ಮೀ ವ್ಯಾಪ್ತಿಯ 30 ಕ್ವಾರೆಗಳನ್ನು 2022ನೇ ಸಾಲಿನಲ್ಲಿ ಸ್ಥಗಿತಗೊಳಿಸಲಾಗಿದೆ. ಉಳಿದಂತೆ ಪರವಾನಗಿ ಹೊಂದಿರುವ ಕ್ವಾರೆ ಹಾಗೂ ಕ್ರಷರ್‌ಗಳಿಗೆ ಪತ್ರ ಬರೆದು ನಿಲುಗಡೆ ಮಾಡಲು ತಿಳಿಸಬೇಕು ಎಂದು ಹೇಳಿದರು.

ಡ್ಯಾಂನಿಂದ 20 ಕಿ.ಮೀ ವ್ಯಾಪ್ತಿಗೆ ಶ್ರೀರಂಗಪಟ್ಟಣ, ಪಾಂಡವಪುರ ಹಾಗೂ ಕೆ.ಆರ್.ಪೇಟೆ ತಾಲೂಕು ಸೇರಲಿದೆ. ಈ ತಾಲೂಕಿನ ತಹಸೀಲ್ದಾರ್‌ಗಳು ಯಾವುದೇ ಗಣಿಗಾರಿಕೆ ನಡೆಯದಂತೆ ನೋಡಿಕೊಳ್ಳಬೇಕು. ಅನಧಿಕೃತವಾಗಿ ನಡೆಯುತ್ತಿರುವ ಬಗ್ಗೆಯೂ ಅಧಿಕಾರಿಗಳ ಹೆಚ್ಚಿನ ಪರಿಶೀಲನೆಗಳನ್ನು ನಡೆಸಿ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಭೂ ವಿಜ್ಞಾನಿ ರೇಷ್ಮಾ, ಡಿಎಫ್‌ಒ ರಾಜು ಇತರರಿದ್ದರು.

RELATED ARTICLES
- Advertisment -
Google search engine

Most Popular