ಮಂಡ್ಯ: ಫೆ.07 ಹಾಗೂ ಫೆ.09 ರಂದು ಮಂಡ್ಯ ಬಂದ್ ಗೆ ಕರೆ ನೀಡಿದ್ದು, ಬಂದ್ ಗೆ ಆಟೋಚಾಲಕರ ಸಂಘ ಹಾಗೂ ವರ್ತಕರು ಸಂಘ ಬೆಂಬಲ ನೀಡಿಲ್ಲ.
ಫೆ.09 ರಂದು ಕೆರಗೋಡು ಹನುಮ ಧ್ವಜದ ವಿವಾದ ಸಂಬಂಧ ಭಜರಂಗದಳ ಹಾಗೂ ಬಿಜೆಪಿ ಬಂದ್ ಗೆ ಕರೆ ನೀಡಿದೆ. ಫೆ.07 ರಂದು ಸಮಾನ ಮನಸ್ಕರ ವೇದಿಕೆ ಶಾಂತಿ ಸೌಹಾರ್ದತೆಗಾಗಿ ಬಂದ್ ಕರೆ ನೀಡಿದೆ.
ಆದರೆ ಆಟೋಚಾಲಕರು ಮಂಡ್ಯ ಬಂದ್ ಗೆ ಯಾವುದೇ ಬೆಂಬಲ ನೀಡಲ್ಲ ಎಂದಿದ್ದಾರೆ. ವಾಣಿಜ್ಯ ಮಂಡಳಿಯಿಂದಲೂ ಬೆಂಬಲ ಘೋಷಣೆ ಮಾಡಲ್ಲ ಎಂದು ವರ್ತಕರು ಹೇಳಿದ್ದಾರೆ.
ಇದು ರಾಜಕೀಯ ಪ್ರೇರಿತ ಬಂದ್ ಆಗಿದೆ. ಹಾಗಾಗಿ ನಾವು ಯಾವುದೇ ಬೆಂಬಲ ನೀಡಲ್ಲ. ಎಂದಿನಂತೆ ನಮ್ಮ ಕರ್ತವ್ಯ ನಿರ್ವಹಿಸುತ್ತಿವೇ ಆಟೋಗಳ ಸಂಚಾರ, ವ್ಯಾಪಾರ ವಹಿವಾಟು ಎಂದಿನಂತೆ ಇರಲಿದೆ ಎಂದು ಆಟೋಚಾಲಕರ ಸಂಘದ ಅಧ್ಯಕ್ಷ ಕೃಷ್ಣ, ಹಾಗೂ ವಾಣಿಜ್ಯ ಮಂಡಳಿ ಅಧ್ಯಕ್ಷ ಪ್ರಭಾಕರ್ ತಿಳಿಸಿದ್ದಾರೆ.