ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ರಾಹುಲ್ ಗಾಂಧಿ ಟೀಕೆ ಹಿನ್ನಲೆ ರಾಹುಲ್ ಗಾಂಧಿ ವಿರುದ್ಧ ಮಂಡ್ಯದ ಸಂಜಯ್ ವೃತ್ತದಲ್ಲಿ ಮಂಡ್ಯ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮಂಡ್ಯ ಬಿಜೆಪಿ ಲೋಕಸಭಾ ಉಸ್ತುವಾರಿ ಸುನೀಲ್ ಸುಬ್ರಹ್ಮಣ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕರು ಜಾತಿ ಯಲ್ಲಿ ದೇಶ ಹೊಡೆಯುವುದು ತಪ್ಪು. ನರೇಂದ್ರ ಮೋದಿ ಇಂದು ವಿಶ್ವ ನಾಯಕರು. ಯಾವುದೇ ದೇಶಕ್ಕೆ ಕರೆ ಮಾಡಿದ್ರು ಮೋದಿ ಅವರ ಮಾತು ನಡೆಯುತ್ತೆ. ರಾಹುಲ್ ಗಾಂಧಿಯವರು ಹಳೆಯ ಚಾಳಿ ತೆಗೆದಿದ್ದಾರೆ ಅದನ್ನ ಬಿಡಬೇಕು. ಕಾಂಗ್ರೆಸ್ ಈ ದೇಶವನ್ನು ಒಡೆಯುವ ಕೆಲಸ ಮಾಡ್ತಿದೆ. ತಕ್ಷಣವೇ ರಾಹುಲ್ ಗಾಂಧಿ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಸಿಪಿ ಉಮೇಶ್, ಮುನಿರಾಜು, ಸೇರಿದಂತೆ ಹಲವರು ಭಾಗಿಯಾಗಿದ್ದರು.