ಮಂಡ್ಯ: ಮಾಜಿ ಸಿಎಂ ಬಿಎಸ್‌ವೈ ಶಕುನಿ ಎಂದು ಟೀಕಿಸಿದ ಯತ್ನಾಳ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಮಂಡ್ಯದ ಅಂಚೆ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು ಅಯೋಗ್ಯ, ಹುಚ್ಚ ಯತ್ನಾಳ್ ಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ವರಿಷ್ಠರಿಗೆ ಪತ್ರ ಬರೆಯಲಾಗಿದೆ.
ಬಿಜೆಪಿ ಒಂದು ಶಿಸ್ತಿನ ಪಕ್ಷ, ಯತ್ನಾಳ್ ಹೇಳಿಕೆ ಪಕ್ಷಕ್ಕೆ ಹಿನ್ನಡೆ ಉಂಟುಮಾಡುತ್ತದೆ. ಅವರ ಎಲ್ಲಾ ಹೇಳಿಕೆ ಸಹಿಸಿಕೊಂಡಿದ್ದೇವೆ. ಮುಂದೆ ಅವರ ಬಾಯಿಗೆ ಬೀಗ ಹಾಕುವ ಕೆಲಸ ಆಗಬೇಕು. ಪಕ್ಷಕ್ಕೆ ಅಗೌರವ ತರದಂತೆ ನಡೆದುಕೊಳ್ಳಲು ಯತ್ನಾಳ್ ತಿಳಿಹೇಳಿ. ಇಲ್ಲವಾದರೆ ಬಿಜೆಪಿ ಕಾರ್ಯಕರ್ತರು, ಬಿಎಸ್ ವೈ ಅನುಯಾಯಿಗಳೇ ಬುದ್ದಿಕಲಿಸಲು ಅವಕಾಶ ಕೊಡಿ ಎಂದು ಬಿಜೆಪಿ ರಾಜ್ಯ ಹಾಗೂ ರಾಷ್ಟ್ರೀಯ ಅಧ್ಯಕ್ಷರಿಗೆ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಪತ್ರ ಬರೆದು ಮನವಿ ಮಾಡಿದ್ದಾರೆ.