ಮಂಡ್ಯ:ಮಂಡ್ಯ ತಾಲೂಕು ಕಚೇರಿ ಆವರಣದಲ್ಲಿ ಇ-ಆಫೀಸ್ ಮೂಲಕ ಕಾರ್ಯನಿರ್ವಹಿಸುವ ವಿಧಾನಕ್ಕೆ ಕೃಷಿ ಸಚಿವ ಚಲುವರಾಯಸ್ವಾಮಿ ಚಾಲನೆ ನೀಡಿದರು. ನಂತರ ಮಾತನಾಡಿ ಇ-ಆಫೀಸ್ ನಿಂದ ಕಡತಗಳ ನಿರ್ವಹಣೆ ಹಾಗೂ ವಿಲೇವಾರಿ ಬೇಗ ಮಾಡಲು ಅನುಕೂಲವಾಗಲಿದೆ.
ಜಿಲ್ಲಾಧಿಕಾರಿಗಳು ತಮ್ಮ ಮೊಬೈಲ್ ನಲ್ಲಿ ಕಡತಗಳು ಯಾವ ಹಂತದಲ್ಲಿದೆ, ಎಲ್ಲಿ ತಡವಾಗಿದೆ ಎಂದು ತಿಳಿದುಕೊಳ್ಳಬಹುದು. ಇದರಿಂದ ಸಾರ್ವಜನಿಕರ ಕಡತಗಳ ವಿಲೇವಾರಿ ಬೇಗ ಆಗಲಿದೆ ಎಂದು ಸಚಿವರು ಹೇಳಿದರು. ತಹಶೀಲ್ದಾರ್ ಕಚೇರಿಯಿಂದ ಉಪ ವಿಭಾಗ ಅಧಿಕಾರಿಗಳ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಗೆ ಕಡತಗಳ ನಿರ್ವಹಣೆ ಇದ್ದರೆ, ಆನ್ಲೈನ್ ನಲ್ಲಿ ಆಫೀಸ್ ಮೂಲಕ ನಡೆಯಲಿದೆ. ಇದರಿಂದ ಜಿಲ್ಲಾಧಿಕಾರಿಗಳು ನೇರವಾಗಿ ಮತ್ತು ಸುಲಭವಾಗಿ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ರವಿಕುಮಾರ್, ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ,ಎಸ್.ಪಿ ಎನ್ ಯತೀಶ್ ಭಾಗಿಯಾಗಿದ್ದರು.
