ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಹೋಬಳಿಯಲ್ಲಿ ತೆಂಗಿನ ಮರಗಳಿಗೆ ಕಪ್ಪುತಲೆ ಹುಳ ರೋಗ ಬಾಧಿಸಿದ್ದು, ತೆಂಗಿನ ಮರಕ್ಕೆ ಆವರಿಸಿದ ರೋಗದಿಂದ ಶ್ರೀರಂಗಪಟ್ಟಣ ತಾಲೂಕಿನ ರೈತರು ಕಂಗಲಾಗಿದ್ದಾರೆ.
ಈ ರೋಗ ಭಾದೆಯಿಂದ ಸಾವಿರಾರು ತೆಂಗಿನ ಮರಗಳು ಸಾಯುವ ಹಂತದಲ್ಲಿವೆ. ತೆಂಗಿನ ಮರಗಳ ಗರಿಗಳು ಕಪ್ಪು ಬಿಳಿ ಬಣ್ಣಕ್ಕೆ ತಿರುಗಿ ಬಿದ್ದು ಸುಳಿ ಒಣಗಿ ನಿಂತಿದೆ.
ಬರದಿಂದ ಕೆಂಗೆಟ್ಟಿದ್ದ ರೈತರಿಗೆ ಬರಸಿಡಿಲಂತೆ ಬಂದು ಆವರಿಸಿರುವ ರೋಗದಿಂದ ರೈತ ಸಂಕುಲ ಕಂಗಲಾಗಿದೆ. ಕೃಷಿ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ವೈರಸ್ ನಂತೆ ರೋಗ ಉಲ್ಬಣವಾಗುತ್ತಿದೆ.
ಸುತ್ತಮುತ್ತಲ ಸಾವಿರಾರು ಎಕರೆ ಪ್ರದೇಶದಲ್ಲಿ ಆವರಿಸಿ ಈ ರೋಗದಿಂದ ಫಸಲು ಬಿಡದೆ ತೆಂಗಿನ ಮರಗಳು ನಾಶವಾಗುತ್ತಿದೆ. ಬೆಳೆ ನಷ್ಟ ಪರಿಹಾರಕ್ಕೆ ರೈತರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ರೈತರಿಗೆ ಬೆಳೆ ನಷ್ಟ ಪರಿಹಾರ ಕೊಡದೆ ಅಧಿಕಾರಿಗಳು ಕಳ್ಳಾಟವಾಡುತ್ತಿದ್ದಾರೆ.
