ಮಂಡ್ಯ: ಹೊಲದಲ್ಲಿ ಹಾವು ಕಡಿತದಿಂದಾಗಿ ಎತ್ತು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮದ್ದೂರು ತಾಲ್ಲೂಕಿನ ಮಲ್ಲನಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಜಮೀನಿನ ಬಳಿ ಕೆಲಸ ಮಾಡುವ ವೇಳೆ ಗ್ರಾಮದ ರೈತ ಮಹಿಳೆ ಗೌರಮ್ಮ ಎಂಬುವವರಿಗೆ ಸೇರಿದ ಎತ್ತಿಗೆ ಹಾವು ಕಚ್ಚಿದೆ. ಪರಿಣಾಮ ಎತ್ತು ಸ್ಥಳದಲ್ಲೇ ಸಾವನ್ನಪ್ಪಿದ್ದು, ರೈತ ಮಹಿಳೆಯ ಗೋಳಾಟ ಹೇಳತೀರದಾಗಿದೆ.
ಎತ್ತು ಕಳೆದುಕೊಂಡ ರೈತ ಮಹಿಳೆಗೆ ಪರಿಹಾರ ನೀಡುವಂತೆ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಗಿದೆ.