Thursday, April 3, 2025
Google search engine

Homeಅಪರಾಧಮಂಡ್ಯ: ಯುವತಿಯ ಶವ ಕೆರೆಯಲ್ಲಿ ಪತ್ತೆ, ಆತ್ಮಹತ್ಯೆ ಶಂಕೆ

ಮಂಡ್ಯ: ಯುವತಿಯ ಶವ ಕೆರೆಯಲ್ಲಿ ಪತ್ತೆ, ಆತ್ಮಹತ್ಯೆ ಶಂಕೆ

ಮಂಡ್ಯ: ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕೆರೆಯಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ನಂಜನಗೂಡು ತಾಲ್ಲೂಕಿನ ಕುರಹಟ್ಟಿ ಗ್ರಾಮದ ಚಾಂದಿನಿ (22) ಮೃತ ಯುವತಿ.

ನಿನ್ನೆ (ಜೂ.04) ಮಧ್ಯಾಹ್ನ ಯುವಕನೊಬ್ಬನೊಂದಿಗೆ ಬೈಕ್ ​​ನಲ್ಲಿ ಬಂದ ಯುವತಿ ಕೆಲಕಾಲ ಕೆರೆಯ ಬಳಿ ಕುಳಿತಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಬಳಿಕ ಯುವತಿ ತನ್ನ ಬ್ಯಾಗು, ಚಪ್ಪಲಿ ಕೆರೆ ದಡದ ಮೇಲಿರಿಸಿ‌ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಸಂಜೆ ಕೆರೆ ದಡದಲ್ಲಿದ್ದ ಬ್ಯಾಗನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಯುವತಿಯ ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತಿ ಮಂಡ್ಯ ಮಿಮ್ಸ್ ಶವಗಾರಕ್ಕೆ ರವಾನೆ ಮಾಡಲಾಗಿದೆ.

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

RELATED ARTICLES
- Advertisment -
Google search engine

Most Popular