ಮಂಡ್ಯ: ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬೀಕನಹಳ್ಳಿಯಲ್ಲಿ ನಡೆದಿದೆ.
ದುಷ್ಕರ್ಮಿಗಳು ರಾಯಣ್ಣ ಅವರ ಕೈಯಲ್ಲಿದ್ದ ಕತ್ತಿ ಮುರಿದು, ಕಾಲು ಸೇರಿದಂತೆ ವಿವಿಧ ಭಾಗಗಳನ್ನು ವಿರೂಪಗೊಳಿಸಿ, ಕುಕೃತ್ಯ ಮೆರೆದಿದ್ದಾರೆ.
ಕಳೆದ ವರ್ಷ ಗ್ರಾಮಸ್ಥರು ಪ್ರತಿಮೆ ಪ್ರತಿಷ್ಟಾಪಿಸಿದ್ದರು. ತಡರಾತ್ರಿ ಕಿಡಿಗೇಡಿಗಳು ದುಷ್ಕೃತ್ಯವೆಸಗಿದ್ದಾರೆ. ಈ ಹಿನ್ನಲೆ ಪ್ರತಿಮೆ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಆರೋಪಿಗಳನ್ನ ಶೀಘ್ರವೇ ಪತ್ತೆ ಹಚ್ಚಿ, ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.