ಮಂಡ್ಯ: ಸರ್ಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸ್ತಿರುವ ಪ್ರತಿಯೊಬ್ಬ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕೆಂಬ ಆದೇಶ ಹೊರಡಿಸಲಾಗಿತ್ತು.
ಆ ಹಿನ್ನಲೆ ಇಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಕಚೇರಿಗೆ ಡಿಸಿ ಡಾ.ಕುಮಾರ್ ದಿಡೀರ್ ಭೇಟಿ ಕೊಟ್ಟರು. ಗುರುತಿನ ಚೀಟಿ ಧರಿಸದ ಅಧಿಕಾರಿಗಳಿಗೆ ಚಳಿ ಬಿಡಿಸಿದರು.
ಕಡ್ಡಾಯವಾಗಿ ಐಡಿ ಕಾರ್ಡ್ ಧರಿಸುವಂತೆ ಸೂಚನೆ ಕೊಟ್ಟರು.ಬಳಿಕ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಕ್ರಮಬದ್ಧ ವಾಗಿರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಕೆಲಸ ಮಾಡಿಕೊಡುವಂತೆ ಸೂಚಿಸಿದರು.
ಇಲ್ಲವಾದರೆ ಸಮಸ್ಯೆ ಏನೂ ಅನ್ನುವ ಬಗ್ಗೆ ಹಿಂಬರಹ ಕೊಡುವಂತೆ ಕಟ್ಟುನಿಟ್ಟಾದ ಸೂಚನೆ ಕೊಟ್ಟಿದ್ದಾರೆ.ತಹಶಿಲ್ದಾರ್ ಸೋಮಶೇಖರ್ ಅವರಿಗೆ ಕಚೇರಿ ಆವರಣವನ್ನು ಸ್ವಚ್ಚತೆ ಕಾಯ್ದುಕೊಳ್ಳಬೇಕು, ಹಿಂದಿನ ತಹಶಿಲ್ದಾರ್ ಸೂಚನೆ ಕೊಟ್ಟರು ಕೂಡ ಪಾಲಿಸಿರಲಿಲ್ಲ ಎಂದರು.
ಸಾರ್ವಜನಿಕರನ್ನು ಕಚೇರಿಗೆ ಅಲೆಸದೆ ಸಾಧ್ಯವಾದಷ್ಟು ಶೀಘ್ರವಾಗಿ ಕೆಲಸ ಮಾಡಿಕೊಡಿ ಎಂದು ತಿಳಿಸಿದರು.
ಬಿಳಿಕ ಇಂಜಿನಿಯರ್ ಗಳೊಟ್ಟಿಗೆ ಶಿವಪುರ ಧ್ವಜ ಸತ್ಯಗ್ರಹ ಸೌಧಕ್ಕೆ ಭೇಟಿ ನೀಡಿ ಆಗಬೇಕಾದ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಗೆ ಪಟ್ಟಿ ಮಾಡಿ ಬೇಗ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸಬೇಕು ಎಂದು ತಿಳಿಸಿದರು.