ಮಂಡ್ಯ : ರಾಜ್ಯ ಚುನಾವಣಾ ಆಯೋಗದಿಂದ ಪ್ರಶಸ್ತಿಗೆ ಭಾಜನರಾದ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರನ್ನು
ಕರ್ನಾಟಕ ರಾಜ್ಯ ರೈತಸಂಘದ (ರೈತಬಣ) ಅಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೆಗೌಡ ಅವರು ಸನ್ಮಾನಿಸಿ ಗೌರವಿಸಿದರು.
ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಸರಳ ಸಜ್ಜನಿಕೆ ಮತ್ತು ಪ್ರಾಮಾಣಿಕ ಅಧಿಕಾರಿಯಾದ ಡಾ.ಕುಮಾರ ಅವರ ದಕ್ಷತೆಯನ್ನು ಪರಿಗಣಿಸಿ ಅವರಿಗೆ ಚುನಾವಣಾ ಆಯೋಗ ಉತ್ತಮ ಚುನಾವಣಾ ಅಧಿಕಾರಿ ಎಂದು ಪ್ರಶಸ್ತಿ ನೀಡಿರುವುದು ನಮ್ಮ ಮಂಡ್ಯ ಜಿಲ್ಲೆಗೆ ಸಂದ ಗೌರವವಾಗಿದೆ.
ಮೂಲತಃ ಹಾಸನ ಜಿಲ್ಲೆಯವರಾದ ಡಾ.ಕುಮಾರ ಅವರು, ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿ, ಕಷ್ಟದಿಂದ ವಿಧ್ಯಾಭ್ಯಾಸ ಪಡೆದು ಸ್ವಂತ ಪರಿಶ್ರಮದಿಂದ ಓದಿ ಐಎಎಸ್ ಅಧಿಕಾರಿ ಆಗಿದ್ದಾರೆ. ಇವರ ಬದುಕು ನಿಜಕ್ಕೂ ಲಕ್ಷಾಂತರ ಯುವಕರಿಗೆ ಸ್ಪೂರ್ತಿಯಾಗಿದೆ. ತಮ್ಮ ಸರಳತೆ ಹಾಗೂ ಜನಪರ ಕೆಲಸಗಳಿಂದಾಗಿ ಮಂಡ್ಯ ಜಿಲ್ಲೆಯ ಉತ್ತಮ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದ ಕಾರಣ ಇಂದು ಜಿಲ್ಲಾಧಿಕಾರಿರವರ ಕಚೇರಿಗೆ ಭೇಟಿ ನೀಡಿ ಡಾ. ಕುಮಾರ ಅವರಿಗೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಿ ಮುಂದೆ ನೀವು ಇನ್ನು ಅತ್ಯುತ್ತಮ ಮೇಲ್ದರ್ಜೆಗೆ ಹೋಗಿ ಅಪಾರ ಸೇವೆ ಸಲ್ಲಿಸಿ ಈ ನಾಡಿನದ್ಯಂತ ಉತ್ತಮ ಹೆಸರು ಹೆಗ್ಗಳಿಕೆ ನಿಮ್ಮದಾಗಲಿ ಎಂದು ಆಶಿಸಿ ಶುಭ ಕೋರಿದ್ದೇವೆ ಎಂದರು.