ಮಂಡ್ಯ: ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಧರಣಿ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ.
ತಮಿಳುನಾಡಿಗೆ ನಿರಂತರವಾಗಿ ನೀರು ಬಿಟ್ಟ ರಾಜ್ಯ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾವೇರಿ ನದಿ ನೀರಿನ ವಿಚಾರವಾಗಿ ರಾಜ್ಯ ಸರ್ಕಾರ ಶಾಶ್ವತ ಪರಿಹಾರ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇಲ್ಲಿಯ ವರೆಗೂ ಕರ್ನಾಟಕ ಸರ್ಕಾರ ತಮಿಳುನಾಡಿಗೆ 35.53 ಟಿಎಂಸಿ ನೀರನ್ನು ಹರಿಸಿದೆ. ವಾಸ್ತವ ಹಂತದಲ್ಲಿ 13 ಟಿಎಂಸಿ ಹಾಗೂ ಮತ್ತೊಂದು ಹಂತದಲ್ಲಿ 7 ಟಿಎಂಸಿ ನೀರು ನಿಗದಿಯಾಗಿತ್ತು. ಆದರೆ ಈಗಾಗಲೇ ನಿಗದಿಯಾದ ನೀರಿಗಿಂತ ಹೆಚ್ಚು ನೀರನ್ನು ಹರಿಸಿದ್ದಾರೆ. ನಮ್ಮ ರಾಜ್ಯದ ಅಣೆಕಟ್ಟೆಯಲ್ಲಿ ನೀರಿನ ಅಭಾವವಾಗಿದೆ. ಮುಂದಿನ ದಿನದಲ್ಲಿ ಬೆಳೆಗಳಿಗೆ ಅಲ್ಲಾ, ಕುಡಿಯುವ ನೀರಿಗೂ ತೊಂದರೆಯಾಗಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಧರಣಿಯಲ್ಲಿ ಮಾಜಿ ಪರಿಷತ್ತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ರೈತ ನಾಯಕಿ ಸುನಂದಾ ಜಯರಾಂ ಸೇರಿ ಹಲವರು ಭಾಗಿಯಾಗಿದ್ದಾರೆ.