Monday, April 21, 2025
Google search engine

Homeರಾಜ್ಯಮಂಡ್ಯ ಡಿಆರ್ ಪೇದೆ ಮಹದೇಶ್ವರ ಬೆಟ್ಟದ ಖಾಸಗಿ ಲಾಡ್ಜ್‌ ನಲ್ಲಿ ನೇಣಿಗೆ ಶರಣು

ಮಂಡ್ಯ ಡಿಆರ್ ಪೇದೆ ಮಹದೇಶ್ವರ ಬೆಟ್ಟದ ಖಾಸಗಿ ಲಾಡ್ಜ್‌ ನಲ್ಲಿ ನೇಣಿಗೆ ಶರಣು

ಹನೂರು: ಮಂಡ್ಯ ಡಿಆರ್ ಪೇದೆಯೋರ್ವ ಮಹದೇಶ್ವರ ಬೆಟ್ಟದ ಖಾಸಗಿ ಲಾಡ್ಜ್‌’ವೊಂದರಲ್ಲಿ ನೇಣಿಗೆ ಶರಣಾಗಿದ್ದಾರೆ.

ಮಂಡ್ಯ ತಾಲೂಕಿನ ಹೊಸಳ್ಳಿ ಗ್ರಾಮದ ರಾಜೇಂದ್ರ ಪ್ರಸಾದ್ (40) ಆತ್ಮಹತ್ಯೆ ಮಾಡಿಕೊಂಡವರು.

ಅವರು ಮ೦ಡ್ಯ ನಗರದಲ್ಲಿ ಡಿಆ‌ರ್ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು,  ಒಬ್ಬರೇ ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದು ಖಾಸಗಿ ಲಾಡ್ಜ್‌ ನಲ್ಲಿ ಉಳಿದುಕೊಂಡಿದರು.  ಬೆಳಗ್ಗೆಯಿಂದಲೂ ರೂಮಿನಿಂದ ಹೊರಬರದ ಕಾರಣ ರೂಮ್ ಬಾಯ್ ನೋಡಿದಾಗ ರಾಜೇಂದ್ರ ಪ್ರಸಾದ್ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡಿದೆ.

ವಿಷಯ ತಿಳಿದ ಮಲೆ ಮಹದೇಶ್ವರ ಬೆಟ್ಟದ ಸಿಪಿಐ ನಂಜುಂಡಸ್ವಾಮಿ ಮತ್ತು ಸಿಬ್ಬಂದಿ ಭೇಟಿ ನೀಡಿ ಮೃತನ ವಿಳಾಸ ತಿಳಿದು ಸಂಬಂಧಿಕರ ಮಾಹಿತಿ ನೀಡಿದ್ದಾರೆ.

ಬಳಿಕ ಸೋಮವಾರ ಬೆಳ್ಳಿಗ್ಗೆ ಹನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಗಾರದಲ್ಲಿ ವೈದ್ಯಾಧಿಕಾರಿ ಡಾಕ್ಟರ್ ಪ್ರಕಾಶ್ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಯಿತು.

RELATED ARTICLES
- Advertisment -
Google search engine

Most Popular