ಮಂಡ್ಯ: ಮಂಡ್ಯ ತಾಲೂಕಿನ ಬಸರಾಳು ಹೋಬಳಿಯಲ್ಲಿ ಜೆಡಿಎಸ್ ನ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಬರ ಅಧ್ಯಯನ ನಡೆಸಲಾಗಿದೆ.
ಮಂಡ್ಯ ತಾಲೂಕಿನ ಹನಗನಹಳ್ಳಿ, ನಂದಹಳ್ಳಿ,ಪುರದಕೊಪ್ಪಲು ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಪ್ರವಾಸ ಮಾಡಿದ ಬರ ಅಧ್ಯಯನ ತಂಡ, ರೈತರು ಬೆಳೆದ ಟೊಮೆಟೊ, ಜೋಳ, ಬಾಳೆ ಬೆಳೆಗಳನ್ನ ವೀಕ್ಷಿಸಿ, ಮಾಹಿತಿ ಪಡೆದರು.
ನೀರಿಲ್ಲದೆ ಒಣಗಿರುವ ಬೆಳೆ ವೀಕ್ಷಿಸಿ, ಸರ್ಕಾರದಿಂದ ಸಿಕ್ಕಿರುವ ನೆರವಿನ ಬಗ್ಗೆ ರೈತರಿಂದ ಮಾಹಿತಿ ಪಡೆಯಲಾಯಿತು.
ನಿಯೋಗದಲ್ಲಿ ಶಾಸಕ ಹೆಚ್.ಟಿ.ಮಂಜು, ಮಾಜಿ ಶಾಸಕರಾದ ಸುರೇಶ್ ಗೌಡ, ಡಿ.ಸಿ.ತಮ್ಮಣ್ಣ, ಕೆ.ಟಿ.ಶ್ರೀಕಂಠೇಗೌಡ, ಮನ್ ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ ಸೇರಿ ಹಲವರು ಭಾಗಿಯಾಗಿದ್ದರು.