Friday, April 11, 2025
Google search engine

Homeರಾಜ್ಯಸುದ್ದಿಜಾಲಮಂಡ್ಯ ಪ್ರವೇಶಕ್ಕೆ ತಡೆ: ಸರ್ಕಾರದ ವಿರುದ್ದ ಪ್ರಮೋದ್ ಮುತಾಲಿಕ್ ಆಕ್ರೋಶ

ಮಂಡ್ಯ ಪ್ರವೇಶಕ್ಕೆ ತಡೆ: ಸರ್ಕಾರದ ವಿರುದ್ದ ಪ್ರಮೋದ್ ಮುತಾಲಿಕ್ ಆಕ್ರೋಶ

ಮಂಡ್ಯ: ನಾಗಮಂಗಲ ಕೋಮು ಗಲಭೆಯಲ್ಲಿ ಬಂಧಿತ ಯುವಕರನ್ನ ಭೇಟಿಯಾಗಲು ತೆರಳುತ್ತಿದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಡೆ ನೀಡಲಾಗಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮದ್ದೂರಿನ ನಿಡಘಟ್ಟದ ಬಳಿ ಮಾತನಾಡಿದ ಪ್ರಮೋದ್ ಮುತಾಲಿಕ್, ಅಂಬೇಡ್ಕರ್ ಅವರು ಸಂವಿಧಾನದ ಮೂಲಕ‌ ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಿದ್ದಾರೆ. ನಾನು ಹೋದ ಮೇಲೆ ಏನಾದರೂ ಆದರೆ ನನ್ನ ಮೇಲೆ‌ ಕೇಸ್ ಹಾಕಿ. ನಮ್ಮನ್ನು ತಡೆಯುವ ಕೆಲಸ ಅಕ್ಷಮ್ಯ ಅಪರಾಧ. ನಮ್ಮ ಸಂಘಟನೆ ಹಾಗೂ ನಮ್ಮ ವೈಚಾರಿಕತೆಯನ್ನು ತಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ನಾನು ನಾಗಮಂಗಲಕ್ಕೆ ಹೋಗ್ತಾ ಇಲ್ಲ. ನಾನು‌ ಹೋಗ್ತಾ ಇರೋದು ಮಂಡ್ಯದ ಜೈಲಿಗೆ. ಇಲ್ಲಿನ‌ ನಾನು ಯಾವುದೇ ಸಭೆ ಮಾಡುತ್ತಿರಲಿಲ್ಲ. ನಾನು‌ ಬಂಧಿತ ಹಿಂದೂ ಯುವಕರನ್ನು‌ ಮಾತಾಡಿಸಲು‌ ಹೋಗುತ್ತಿದ್ದೆ. ನಮ್ಮನ್ನು ತಡೆದಿರೋದನ್ನು ಖಂಡಿಸುತ್ತೇನೆ. ಕಾಂಗ್ರೆಸ್ ಸರ್ಕಾರ‌ ಬಂದಾಗಿನಿಂದ ನಿರಂತರವಾಗಿ ಹಿಂದೂಗಳ ಮೇಲೆ‌ ದೌರ್ಜನ್ಯವಾಗುತ್ತಿದೆ. ಇದಕ್ಕೆ ನಾಗಮಂಗಲ ಹಾಗೂ ದಾವಣಗೆರೆ ಘಟನೆ ಸಾಕ್ಷಿ. ಪ್ಯಾಲಿಸ್ಟೈನ್ ಧ್ವಜ ಹಾರಿಸುವ ಮುಸ್ಲಿಂರಿಗೆ ಏನ್‌‌ ಸಂಬಂಧ. ಇವತ್ತು ಪ್ಯಾಲಿಸ್ಟೈನ್ ಧ್ವಜ ಹಾರಿಸುತ್ತಾರೆ ನಾಳೆ ಪಾಕಿಸ್ತಾನದ ಧ್ವಜ ಹಾರಿಸುತ್ತಾರೆ. ಇಂತವರನ್ನು ಶೂಟ್ ಮಾಡಬೇಕು.

ಈದ್ ಮೀಲಾದ್ ವೇಳೆ‌ ಆ ಬಾವುಟ ಯಾಕೆ‌ ಹಾರಿಸಬೇಕು. ಇದು ಕಾಂಗ್ರೆಸ್ ಕುಮ್ಮಕ್ಕಿನಿಂದಲೇ ನಡೆಯುತ್ತಿರೋದು. ಕಾಂಗ್ರೆಸ್ ದೇಶ ದ್ರೋಹಿಗಳಿಗೆ ಸಪೋರ್ಟ್ ಮಾಡೋದನ್ನು‌ ಹಿಂದೂಗಳು ಒಪ್ಪಲ್ಲ ಎಂದು ವಾಗ್ದಾಳಿ ನಡೆಸಿದರು.

RELATED ARTICLES
- Advertisment -
Google search engine

Most Popular