ಮಂಡ್ಯ: ಕಾವೇರಿಗಾಗಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ಕಳೆದ 107 ದಿನಗಳಿಂದ ರೈತ ಹಿತರಕ್ಷಣಾ ಸಮಿತಿ ಧರಣಿ ನಡೆಯುತ್ತಿದ್ದು, ಧರಣಿ ಜೊತೆ ಉಪವಾಸ ಸತ್ಯಾಗ್ರಹ 26 ನೇ ದಿನಕ್ಕೆ ಕಾಲಿಟ್ಟಿದೆ.
ರಾಜ್ಯ ಸರ್ಕಾರ ಯಾವುದೇ ನಿಲುವು ತೆಗೆದುಕೊಳ್ಳುತ್ತಿಲ್ಲ. ನಿರಂತರವಾಗಿ ರಾಜ್ಯಕ್ಕೆ ಪ್ರಾಧಿಕಾರ ಅನ್ಯಾಯ ಮಾಡ್ತಿದೆ. ಪ್ರಾಧಿಕಾರಗಳನ್ನ ರದ್ದು ಮಾಡಬೇಕು. ಮತ್ತೆ ತಮಿಳುನಾಡಿಗೆ ನೀರು ಬಿಡಬೇಕು ಎಂಬ ಆದೇಶ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.
ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಇದೇ ಸಂದರ್ಭದಲ್ಲಿ ರೈತರು ಎಚ್ಚರಿಕೆ ನೀಡಿದ್ದಾರೆ.