ಮಂಡ್ಯ: ಸಕ್ಕರೆನಾಡಲ್ಲಿ ಅನ್ನದಾತರ ಕಾವೇರಿ ಕಿಚ್ಚಿನ ಆಕ್ರೋಶ ತೀವ್ರಗೊಂಡಿದ್ದು, ತಮಿಳುನಾಡಿಗೆ ಕಾವೇರಿ ನೀರು, ಮಂಡ್ಯ ರೈತರಿಗೆ ನೇಣು ಭಾಗ್ಯ ನೀಡಿದೆ ಎಂದು ಆರೋಪಿಸಿ ರೈತರು ನೇಣು ಕುಣಿಕೆ ಮೆರವಣಿಗೆ ನಡೆಸಿದರು.
ಭೂಮಿತಾಯಿ ಹೋರಾಟ ಸಮಿತಿ ಹೋರಾಟ ಬೆಂಬಲಿಸಿ ಕಡತನಾಳು ಗ್ರಾಮದ ರೈತರು ಶ್ರೀರಂಗಪಟ್ಟಣದ ಕುವೆಂಪು ವೃತ್ತದಿಂದ ತಾಲೂಕು ಕಚೇರಿವರೆಗೂ ನೇಣು ಕುಣಿಕೆ ಸ್ತಬ್ಥ ಚಿತ್ರದದೊಂದಿಗೆ ರೈತರು ಪ್ರತಿಭಟಿಸಿದ್ದಾರೆ.
ಪಟ್ಟಣದ ತಾಲೂಕು ಕಚೇರಿ ಮುಂದೆ ನೇಣು ಕುಣಿಕೆ ಹಿಡಿದು ಧರಣಿ ನಡೆಸಿದ್ದಾರೆ.
ನೀರು ಬಿಟ್ಟ ಸರ್ಕಾರ ಹಾಗೂ ಸಿ.ಎಂ ವಿರುದ್ಧ ಧಿಕ್ಕಾರ ಕೂಗಿ ರೈತರ ಅಸಮಧಾನ ವ್ಯಕ್ತಪಡಿಸಿ, ತಕ್ಷಣವೇ ಡ್ಯಾಂ ನಿಂದ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸುವಂತೆ ರೈತರ ಒತ್ತಾಯಿಸಿದ್ದಾರೆ.