ಮಂಡ್ಯ: ಗೋವಾ ಸಿ.ಎಂ, ಯದುವೀರ್, ಮಾಜಿ ಸಚಿವ ಪುಟ್ಟರಾಜು ಸೇರಿ ಹಲವು ಗಣ್ಯರು ಲಿಫ್ಟ್ ನಲ್ಲಿ ಸಿಲುಕಿದ ಘಟನೆ ಮಂಡ್ಯ ನಗರದ ಅಮರಾವತಿ ಹೋಟೇಲ್ ನಲ್ಲಿ ನಡೆದಿದೆ.
ಸುದ್ದಿಗೋಷ್ಟಿ ಮುಗಿಸಿ ಹೊರ ಹೋಗುವಾಗ ಹೆಚ್ಚು ಜನರು ಲಿಪ್ಟ್ ಗೆ ಹತ್ತಿದ್ದರಿಂದ ಅರ್ಧಕ್ಕೆ ಬಂದು ಲಿಫ್ಟ್ ಕೈಕೊಟ್ಟಿದೆ. ಇದರಿಂದಾಗಿ ಸ್ಥಳದಲ್ಲಿ ಕೆಲ ಕಾಲ ಗೊಂದಲ, ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕೂಡಲೇ ಹೋಟೆಲ್ ನ ತಾಂತ್ರಿಕ ಸಿಬ್ಬಂದಿಗಳು ಬಂದು ಲಿಫ್ಟ್ ಬಾಗಿಲು ದುರಸ್ಥಿ ಮಾಡಿದರು.