ಮಂಡ್ಯ: ಮಂಡ್ಯದಲ್ಲಿಂದು ಅಂಬೇಡ್ಕರ್ ಭವನದಲ್ಲಿ ಹೆಚ್ ಡಿ ಕುಮಾರಸ್ವಾಮಿ ಜನತಾದರ್ಶನ ನಡೆಸಲಿದ್ದು, ಜನತಾದರ್ಶನಕ್ಕೂ ಮೊದಲಿಗೆ ಕಾಳಿಕಾಂಭ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಡಿಸಿ, ಎಸ್ಪಿ, ಎಡಿಸಿ, ಸಿಇಓ ಸ್ವಾಗತಿಸಿದರು.
ಚುನಾವಣೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಅತ್ಯಂತ ಬಹುಮತಗಳಿಂದ ಜಯಗಳಿಸಲಿ ಎಂದು ಬಿಜೆಪಿಗರು ಕಾಳಿಕಾಂಭ ದೇವಸ್ಥಾನ ಎದುರಿನ ಬಿಲ್ವಪತ್ರೆ ಮರದಲ್ಲಿ ಹರಕೆ ಗಂಟು ಕಟ್ಟಿದ್ದರು. ಹರಕೆ ಗಂಟಿಗೆ ಪೂಜೆ ಸಲ್ಲಿಸಿ ಹರಕೆ ಗಂಟನ್ನು ಹೆಚ್.ಡಿ.ಕುಮಾರಸ್ವಾಮಿ ಬಿಚ್ಚಿದ್ದಾರೆ.

ಇಂದು ಅಮವಾಸ್ಯೆ ಹಿನ್ನಲೆ ಹರಕೆ ಗಂಟು ಬಿಟ್ಟಿ ಕಾಳಿಕಾಂಭ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಹೆಚ್ಡಿಕೆ ಗೆ ಮಾಜಿ ಸಚಿವ ಪುಟ್ಟರಾಜು, ಜೆಡಿಎಸ್ ಮಾಜಿ ಶಾಸಕರು ಸಾಥ್ ನೀಡಿದರು.
ನಂತರ ರೈತ ಸಭಾಂಗಣಕ್ಕೆ ಭೇಟಿ ನೀಡಿ, ರೈತ ಸಭಾಂಗಣದ ನವೀಕರಣ ಸಂಬಂಧ ಪರಿಶೀಲನೆ ನಡೆಸಲಿದ್ದಾರೆ. ರೈತ ಸಭಾಂಗಣ ವೀಕ್ಷಿಸಿ, ನವೀಕರಣ ಕಾಮಗಾರಿಗೆ ಅನುದಾನ ಘೋಷಿಸುವ ಸಾಧ್ಯತೆ ಇದೆ. ಸಾರ್ವಜನಿಕರನ್ನ ಭೇಟಿ ಮಾಡಿ, ಅಹವಾಲು ಸ್ವೀಕಾರ ಮಾಡಲಿದ್ದಾರೆ.