ಮಂಡ್ಯ:: ಒಂದೆಡೆ ಕೋಮು ಗಲಭೆಯಿಂದ ನಾಗಮಂಗಲ ಹೊತ್ತಿ ಉರಿದಿದ್ದು, ಮತ್ತೊಂದೆಡೆ ಗಣೇಶನ ಮೂರ್ತಿ ವಿಸರ್ಜನೆ ವೇಳೆ ಮುಸ್ಲಿಂ ಯುವಕರು ಭಾಗಿಯಾಗಿ ಸಾಮರಸ್ಯ ಮೆರೆದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ.
ಪರಸ್ಪರ ಟೋಪಿ, ಶಾಲು ಹಾಕಿ ಮುಸ್ಲಿಂ ಯುವಕರು ಸಾಮರಸ್ಯ ಮೆರೆದಿದ್ದರೆ, ಇನ್ನೊಂದು ಕಡೆ ಮುಸ್ಲಿಂ ಯುವಕನಿಗೆ ಹಿಂದೂ ಯುವಕ ಕೇಸರಿ ಶಾಲು ಹಾಕಿ ಸೌಹಾರ್ದತೆ ಮೆರೆದಿದ್ದಾರೆ.

ಗಣೇಶಮೂರ್ತಿ ಇದ್ದ ಟ್ರ್ಯಾಕ್ಟರ್ ಅನ್ನು ಮುಸ್ಲಿಂ ಯುವಕ ಚಾಲನೆ ಮಾಡಿದ್ದು ಅಪರೂಪದ ಘಟನೆಗೆ ಕೊಪ್ಪ ಗ್ರಾಮ ಸಾಕ್ಷಿಯಾಗಿದೆ. ಒಟ್ಟಿನಲ್ಲಿ ಹಿಂದೂ- ಮುಸ್ಲಿಂ ಯುವಕರು ಒಗ್ಗಟ್ಟಾಗಿ ಸೇರಿ ಅದ್ದೂರಿಯಾಗಿ ಗಣೇಶ ಮೆರವಣಿಗೆ ಮಾಡಿದ್ದಾರೆ.