ಮಂಡ್ಯ: ಕೆ.ಆರ್.ಪೇಟೆ ತಾಲ್ಲೂಕಿನ ಮಾಕವಳ್ಳಿ ಗ್ರಾಮದ ಮನೆಯೊಂದು ತೀವ್ರ ಮಳೆಗೆ ಕುಸಿದು ನೆಲಸಮಗೊಂಡಿದ್ದು, ಬಡ ಕುಟುಂಬ ಕಂಗಾಲಾಗಿದೆ.
ಎಡಬಿಡದೆ ಹಲವು ದಿನಗಳಿಂದ ಅಬ್ಬರಿಸುತ್ತಿರುವ ವರ್ಣನ ಆರ್ಭಟಕ್ಕೆ ಗ್ರಾಮದ ಬಡ ರೈತ ಮಂಜಯ್ಯ ಎಂಬುವವರಿಗೆ ಸೇರಿದ ಮನೆ ಕುಸಿತವಾಗಿದೆ. ಬೆಳಗಿನ ಜಾವ ಗೋಡೆ ಸಂಪೂರ್ಣ ಧರೆಗೆ ಉರುಳಿ ಬಿದ್ದಿದೆ. ದುಡಿದು ಜೀವನ ಸಾಗುಸುತ್ತಿದ ಕುಟುಂಬ ಈ ಘಟನೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಘಟನಾ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಶ್ವೇತ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಪರಿಹಾರಕ್ಕಾಗಿ ತಾಲೂಕು ಆಡಳಿತಕ್ಕೆ ಬಡ ಕುಟುಂಬ ಮನವಿ ಮಾಡಿದೆ.