ಮಂಡ್ಯ: ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದ ರಸ್ತೆಯಲ್ಲಿರುವ ಪಿಎಲ್.ಡಿ ಬ್ಯಾಂಕ್ ನಲ್ಲಿ ನಿರ್ಮಾಣವಾಗಿರುವ ಜಿ.ಮಾದೇಗೌಡರ ಸಹಕಾರ ಸಭಾಂಗಣವನ್ನು ಉದ್ಘಾಟಿಸಲಾಯಿತು.
ಪಿಎಲ್.ಡಿ.ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ನೂತನ ಸಭಾಂಗಣವನ್ನು ಪರಿಷತ್ ಸದಸ್ಯ ಮಧು ಜಿ ಮಾದೇಗೌಡ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಜಿ.ಮಾದೇಗೌಡರ ಸಭಾಂಗಣ ಉದ್ಘಾಟನೆಯಾಗಿರುವುದು ಸಂತಸ. ಮಾದೇಗೌಡರ ಹೆಸರಿನಲ್ಲಿ ಆಗಿರುವುದು ಇನ್ನು ಹರ್ಷ ತಂದದಿದೆ. ಎಲ್ಲರಿಗೂ ಸಹ ಶುಭಾವಾಗಲಿ ಎಂದು ಹಾರೈಸಿದರು.
ಇದೇ ವೇಳೆ ಶಾಸಕ ಗಣಿಗ ರವಿಕುಮಾರ್, ಸೇರಿ ಬ್ಯಾಂಕ್ ನಿರ್ದೇಶಕರು, ಸಿಬ್ಬಂದಿಗಳು ಭಾಗಿಯಾಗಿದ್ದರು.