ಮಂಡ್ಯ: ಜನರಿಗೆ ಬೇಡ ಜಾನುವಾರುಗಳಿಗಾದ್ರು ನೀರು ಕೊಡಿ ಎಂದು ಒತ್ತಾಯಿಸಿ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ರಾಸುಗಳೊಂದಿಗೆ ರೈತರು ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಭೂಮಿ ತಾಯಿ ಹೋರಾಟ ಸಮಿತಿ ವತಿಯಿಂದ ಪಟ್ಟಣದ ಕುವೆಂಪು ವೃತ್ತದಿಂದ ತಾಲೂಕು ಕಚೇರಿವರೆಗೂ ರಾಸು ಗಳೊಂದಿಗೆ ಮೆರವಣಿಗೆ ನಡೆಸಿದ್ದಾರೆ.
ತಮಿಳುನಾಡಿಗೆ ನೀರು ಬಿಡ್ತಿರೋ ರಾಜ್ಯ ಸರ್ಕಾರದ ವಿರುದ್ದ ರೈತರ ಆಕ್ರೋಶ ವ್ಯಕ್ತಪಡಿಸಿ ಜನರಿಗಲ್ಲದಿದ್ರು ಮೂಕ ಪ್ರಾಣಿಗಳಿಗಾದ್ರು ನೀರು ಕೊಡುವಂತೆ ಆಗ್ರಹಿಸಿದ್ದಾರೆ.