ಮಂಡ್ಯ: ಶ್ರೀರಂಗಪಟ್ಟಣದ ಕರಿಘಟ್ಟದ ತಪ್ಪಲಿನಲ್ಲಿರುವ ಕರಿಘಟ್ಟ ಸೇತುವೆ ಈಗ ಫ್ರೀವೆಡ್ಡಿಂಗ್ ಶೂಟಿಂಗ್ ಗೆ ಹಾಟ್ ಸ್ಪಾಟ್ ಆಗಿದೆ. ಈ ಸೇತುವೆ ಮೇಲೆ ಪ್ರತಿನಿತ್ಯ ಪ್ರಿ ವೆಡ್ಡಿಂಗ್ ಶೂಟ್ ನಡೆಯುತ್ತದೆ.
ಇದೀಗ ಸಕ್ಕತ್ ಟ್ರೆಂಡ್ ಆಗಿರುವ ಭಾವಿ ದಂಪತಿಗಳ ಶೂಟಿಂಗ್ ಸುತ್ತಾಟ…… ಕರಿಘಟ್ಟದ ತಪ್ಪಲು ಸೇರಿದಂತೆ ಈ ಸೇತುವೆ ಮೇಲೆ ನಿತ್ಯ ಬೆಳಿಗ್ಗೆಯಿಂದ ಸಂಜೆವರೆಗೂ ಚಿತ್ರೀಕರಣ ನಡೆಯುತ್ತಿದೆ.
ಈ ಚಿತ್ರೀಕರಣದ ಸಮಯದಲ್ಲಿ ಕೆಲವು ಸಾರಿ ಸಂಚಾರಕ್ಕೆ ಕಿರಿಕಿರಿ ಉಂಟಾಗಿದೆ. ಮತ್ತೊಮ್ಮೆ ಕಾರಿನ ಮೇಲೆ, ಬೈಕ್ ಮೇಲೆ ಕುಳಿತು ಅಪಾಯಕ್ಕೆ ಆಹ್ವಾನ ನೀಡಿದ ರೀತಿ ಚಿತ್ರೀಕರಣ ನಡೆಸಲಾಗುತ್ತಿದೆ.