ಮಂಡ್ಯ: ಮೋಟಾರ್ ಲೈನ್ ತಂತಿ ತಗುಲಿ ಚಿರತೆ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮದ ಜಮೀನೊಂದರಲ್ಲಿ ನಡೆದಿದೆ.
ರಾಘುದೇವಸೇಗೌಡ್ರು, ಎಂಬುವವರಿಗೆ ಸೇರಿದ ಜಮೀನಾಗಿದ್ದು, ಜಮೀನಿನ ಬಳಿ ಮರಹತ್ತುವ ವೇಳೆ ಮೋಟಾರ್ ಲೈನ್ ತಂತಿ ತಗುಲಿ ಚಿರತೆ ಮೃತಪಟ್ಟಿದೆ.
ಚಿರತೆ ಮೃತಪಟ್ಟಿರುವ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.