Monday, April 21, 2025
Google search engine

Homeರಾಜಕೀಯಪಕ್ಷಕ್ಕೆ ದುಡಿದವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್: ಸಚಿವ ಎನ್ ಚಲುವರಾಯಸ್ವಾಮಿ

ಪಕ್ಷಕ್ಕೆ ದುಡಿದವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್: ಸಚಿವ ಎನ್ ಚಲುವರಾಯಸ್ವಾಮಿ

ಮಂಡ್ಯ: ಪಕ್ಷಕ್ಕೆ ದುಡಿದವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗಲಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲರೂ ಒಂದು ಲೈನ್ ರೆಸ್ಯೂಲೇಷನ್ ಕೊಟ್ಟಿದ್ದಾರೆ. ಮುಖಂಡರ ಅಭಿಪ್ರಾಯವನ್ನು ಸಿಎಂ ಸಿದ್ದರಾಮಯ್ಯ ಮತ್ತು ಪಕ್ಷದ ಅಧ್ಯಕ್ಷರಿಗೆ ತಿಳಿಸುತ್ತೇವೆ ಎಂದು ಹೇಳಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಯಾವತ್ತೂ ಚುನಾವಣಾ ಪೂರ್ವ ಮೈತ್ರಿಗೆ ಹೋಗಿಲ್ಲ. ರಾಜ್ಯದಲ್ಲಿ ಬಿಜೆಪಿ ಪರಿಸ್ಥಿತಿ ಹೀನಾಯವಾಗಿದೆ. ಹೀಗಾಗಿ ಜೆಡಿಎಸ್ ಜೊತೆ ಬಿಜೆಪಿಯವರು ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಮೇಕೆದಾಟು ಮಾಡುವುದರಿಂದ ಏನು ತೊಂದರೆ ಎಂದು ತಮಿಳುನಾಡಿಗೆ ನ್ಯಾಯಧೀಶರು ಹೇಳಿದ್ದಾರೆ. ನಾಳೆ ಕೇಂದ್ರ ಅನುಮತಿ ಕೊಟ್ಟರೆ ನಾಡಿದ್ದೆ ಕಾಮಗಾರಿ ಆರಂಭಿಸುತ್ತೇವೆ ಎಂದರು. ಕನ್ಯಾಕುಮಾರಿಯಿಂದ ಕಾಶ್ಮೀರದ ಬಗ್ಗೆ ಪಾದಯಾತ್ರೆ ಯಾರು ಮಾಡಿಲ್ಲ. ರಾಹುಲ್ ಗಾಂಧಿ ಮಾಡಿದ್ದಾರೆ. ಜೆಡಿಎಸ್ ಅಧಿಕಾರದಲ್ಲಿ ಇದ್ದಾಗ ಐದು ವರ್ಷ ಪೂರೈಸುತ್ತೆ ಎಂದು ಜೆಡಿಎಸ್ ನಾಯಕರೇ ಹೇಳಿಲ್ಲ. ಚುನಾವಣೆಗಾಗಿ ಗ್ಯಾರಂಟಿ ಕೊಟ್ಟಿಲ್ಲ. ಕುಮಾರಸ್ವಾಮಿ ಬಿಡುಗಡೆ ಮಾಡಿದ್ದ ಎಂಟು ಸಾವಿರ ಕೋಟಿ ರೂ. ಹುಡುಕುತ್ತಿದ್ದೇನೆ ಎಲ್ಲೂ ಸಿಗುತ್ತಿಲ್ಲ. ಆ ಕಡತ ಎಲ್ಲದರೂ ಸಿಕ್ಕಿದರೇ ಕೊಡಿ. ಸರ್ಕಾರ ಕೆಡವಲು ಹೋದರೇ ನಾವೇನೂ ಕಡಲೇಕಾಯಿ ತಿನ್ನುತ್ತಿರುತ್ತೇವಾ ಎಂದಿದ್ದಾರೆ.

RELATED ARTICLES
- Advertisment -
Google search engine

Most Popular