ಮಂಡ್ಯ: ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಗಳಿಗೆ ಸೀಮಂತ ಕಾರ್ಯ ಮಾಡಿದ ಘಟನೆ ನಡೆದಿದೆ.
ಠಾಣೆಯ ಸಬ್ ಇನ್ಸ್ಪೆಕ್ಟರ್ ರೇವತಿ ನೇತೃತ್ವದಲ್ಲಿ ಸೀಮಂತ ಕಾರ್ಯ ನೆರವೇರಿದೆ.
ಗರ್ಭಿಣಿ ಮಹಿಳಾ ಪೇದೆಗಳಾದ ಸಜಿನಿ ಮತ್ತು ಶಿಲ್ಪಶ್ರೀ ಅವರಿಗೆ ಸೀಮಂತ ಕಾರ್ಯ ನಡೆದಿದೆ.

ಪೇದೆಗಳಿಬ್ಬರಿಗೂ ಮಡಿಲು ತುಂಬಿ , ಆರತಿ ಬೆಳಗಿ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯ ಮಾಡಿ ಶುಭ ಹಾರೈಸಿದ್ದಾರೆ. ಸಹದ್ಯೋಗಿಗಳು ನೀಡಿದ ಆತ್ಮೀಯ ಸೀಮಂತ ಕಾರ್ಯ ಕಂಡು ಪೇದೆಗಳ ಕಣ್ಣಲ್ಲಿ ಆನಂದ ಭಾಷ್ಪ ತುಂಬಿ ಬಂದಿದೆ.