ಮಂಡ್ಯ: ಸಚಿವ ಜಮೀರ್ ಅಹ್ಮದ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ಮಂಡ್ಯ ಮಿಮ್ಸ್ ಆಸ್ಪತ್ರೆಯ ಹೆರಿಗೆ ವಾರ್ಡ್ ಬಳಿಯ ಗರ್ಭಿಣಿ- ಬಾಣಂತಿಯರಿಗೆ ಹಣ್ಣು ಹಂಪಲು ಹಾಗೂ ನಿರ್ಗತಿಕರಿಗೆ ಪೌಷ್ಟಿಕ ಆಹಾರವನ್ನು ವಿತರಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ ಕುಮಾರ್, ಸಚಿವ ಜಮೀರ್ ಅಹಮ್ಮದ್ ಅವರಿಗೆ ದೇವರು ಒಳ್ಳೆಯದು ಮಾಡಲಿ. ಸಚಿವರಾಗಿದ್ದಾರೆ ಒಳ್ಳೆಯ ಕೆಲಸ ಮಾಡ್ತಿದ್ದಾರೆ ರಾಜ್ಯದ ಬಡವರ ಪರ ಇದ್ದಾರೆ. ಅವರು ಮತ್ತಷ್ಟು ರಾಜಕೀಯದಲ್ಲಿ ಬೆಳೆಯಲಿ ಎಂದರು.
ಇದೇ ವೇಳೆ ನಗರಸಭೆ ಸದಸ್ಯ ನಹೀಮ್ ಸೇರಿ ಹಲವರು ಭಾಗಿಯಾಗಿದ್ದರು.